ಮೈಸೂರು ಕೆಅರ್ ಆಸ್ಪತ್ರೆ ಬೆಡ್ ಗಳ ಸಂಖ್ಯೆಯನ್ನು 1,200 ರಿಂದ ಮತ್ತಷ್ಟು ಹೆಚ್ಚಿಸುವ ಯೋಚನೆ ಸರ್ಕಾರಕ್ಕಿದೆ: ಸಿದ್ದರಾಮಯ್ಯ, ಸಿಎಂ

|

Updated on: Aug 29, 2023 | 6:32 PM

ನಗರದಲ್ಲಿಂದು ಸುಟ್ಟಗಾಯಗಳಿಗಾಗಿ ಕೆಆರ್ ಆಸ್ಪತ್ರೆ ಆವರಣದಲ್ಲೇ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕೆಅರ್ ಆಸ್ಪತ್ರೆಗೆ ಕಾಯಕಲ್ಪ ಒದಗಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆಸ್ಪತ್ರೆಯನ್ನು ಉನ್ನತೀಕರಣಗೊಳಿಸುವ ಕೆಲಸ ಸದಾ ಜಾರಿಯಲ್ಲಿದೆ ಎಂದು ಹೇಳಿದರು.

ಮೈಸೂರು: ಮೈಸೂರಲ್ಲಿ ತಮ್ಮ ವಾಸ್ತವ್ಯದ ಎರಡನೇ ದಿನವಾಗಿದ್ದ ಇಂದು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಹಳ ಬ್ಯೂಸಿಯಾಗಿದ್ದರು. ನಾಳೆ ಅವರ ಸರ್ಕಾರಕ್ಕೆ ಒಂದು ಮಹತ್ವದ ದಿನವಾಗಿದೆ. ಜನತೆಗೆ ನೀಡಿದ 5 ಗ್ಯಾರಂಟಿಗಳಲ್ಲಿ ನಾಲ್ಕನೆಯದಾಗಿರುವ ಗೃಹ ನಾಳೆಯಿಂದ ಜಾರಿಗೊಳ್ಳಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಸಂಸದ ರಾಹುಲ್ ಗಾಂಧಿ (Rahul Gandhi) ಆಗಮಿಸುತ್ತಿದ್ದಾರೆ. ನಗರದಲ್ಲಿಂದು ಸುಟ್ಟಗಾಯಗಳಿಗಾಗಿ ಕೆಆರ್ ಆಸ್ಪತ್ರೆ (KR Hospital) ಆವರಣದಲ್ಲೇ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕೆಅರ್ ಆಸ್ಪತ್ರೆಗೆ ಕಾಯಕಲ್ಪ ಒದಗಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆಸ್ಪತ್ರೆಯನ್ನು ಉನ್ನತೀಕರಣಗೊಳಿಸುವ (upgrade ) ಕೆಲಸ ಸದಾ ಜಾರಿಯಲ್ಲಿದೆ ಎಂದು ಹೇಳಿದರು. ಬಳಿಕ ಅವರು ಕೆಆರ್ ಆಸ್ಪತ್ರೆ 1,200 ಬೆಡ್ ಸೌಲಭ್ಯವಿರುವ ಆಸ್ಪತ್ರೆ ಅನ್ನುವುದನ್ನು ತಮ್ಮ ಪಕ್ಕದಲ್ಲಿದ್ದ ವೈದ್ಯಾಧಿಕಾರಿಯೊಬ್ಬರಿಂದ ಖಚಿತ ಪಡಿಸಿಕೊಂಡು ಬೆಡ್ ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಯೋಚನೆ ಇದೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ