BC Nagesh; ಮುಸ್ಲಿಂ ಸಮುದಾಯ ಓಲೈಸಲು ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ದುರಂತ: ಬಿಸಿ ನಾಗೇಶ್, ಮಾಜಿ ಸಚಿವ

|

Updated on: May 30, 2023 | 6:13 PM

ನೆಹರೂ ಅವರಿಗೆ ತಮ್ಮ ಮಗಳು ಬರೆದ ಪತ್ರಗಳನ್ನು ಪಠ್ಯವಾಗಿ ನಮ್ಮ ಮಕ್ಕಳು ಓದಬೇಕಿರುವುದು ನಿಜಕ್ಕೂ ದುರಂತ ಎಂದು ನಾಗೇಶ್ ಹೇಳಿದರು

ತುಮಕೂರು:  ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರು ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಮುಂದಾಗಿರುವುದನ್ನು ವಿರೋಧಿಸಿದ್ದಾರೆ. ತುಮಕೂರಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಾಜಿ ಶಾಸಕರು, ನೆಹರೂ (Nehru) ಅವರಿಗೆ ತಮ್ಮ ಮಗಳು ಬರೆದ ಪತ್ರಗಳನ್ನು ಪಠ್ಯವಾಗಿ ನಮ್ಮ ಮಕ್ಕಳು ಓದಬೇಕಿರುವುದು ನಿಜಕ್ಕೂ ದುರಂತ ಎಂದು ಹೇಳಿದರು. ಮುಸ್ಲಿಂ ಸಮುದಾಯದ ಮಕ್ಕಳಿಗೆ ಹಿಜಾಬ್ (hijab) ಧರಿಸುವ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವುದು ದುರದೃಷ್ಟಕರ ಎಂದು ಸಚಿವರು ಹೇಳಿದರು. ಕೇವಲ ಮುಸ್ಲಿಂ ಸಮುದಾಯದ ಓಲೈಕೆಗೆ ಸರ್ಕಾರ ಮುಂದಾಗಿರುವುದು ಶೋಚನೀಯ ಸಂಗತಿ ಎಂದು ಬಿಸಿ ನಾಗೇಶ್ ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ