Pre-Poll Survey: ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ತಿಪಟೂರಿನಲ್ಲಿ ಬಿಸಿ ನಾಗೇಶ್ ಗೆಲುವಿನ ಸಾಧ್ಯತೆ; ಸಮೀಕ್ಷೆ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದ ಬಬಲೇಶ್ವರದಲ್ಲಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹಾಗೂ ತುಮಕೂರಿನ ತಿಪಟೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕ, ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆಲುವು ಸಾಧಿಸಬಹುದು ಎಂದು ‘ಲೋಕ್​ ಪೋಲ್ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.

Pre-Poll Survey: ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ತಿಪಟೂರಿನಲ್ಲಿ ಬಿಸಿ ನಾಗೇಶ್ ಗೆಲುವಿನ ಸಾಧ್ಯತೆ; ಸಮೀಕ್ಷೆ
ಎಂಬಿ ಪಾಟೀಲ್
Follow us
Ganapathi Sharma
|

Updated on: Mar 14, 2023 | 9:26 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದ ಬಬಲೇಶ್ವರದಲ್ಲಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ (MB Patil) ಹಾಗೂ ತುಮಕೂರಿನ ತಿಪಟೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕ, ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಗೆಲುವು ಸಾಧಿಸಬಹುದು ಎಂದು ‘ಲೋಕ್​ ಪೋಲ್ (Lok Poll)’ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ (Pre-poll survey) ತಿಳಿಸಿದೆ. ಸಂಸ್ಥೆಯು ರಾಜ್ಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಕಾಂಗ್ರೆಸ್​​ಗೆ ಸ್ಪಷ್ಟ ಬಹುಮತ ದೊರೆಯಲಿದೆ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಇತ್ತೀಚೆಗೆ ತಿಳಿಸಿತ್ತು. ಇದೀಗ ಕೆಲವು ಕ್ಷೇತ್ರಗಳ ಸಂಭಾವ್ಯ ಗೆಲುವಿನ ವಿವರಗಳನ್ನೂ ಟ್ವೀಟ್ ಮಾಡಿದೆ.

ಬಬಲೇಶ್ವರದಲ್ಲಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಶೇ 55ರಷ್ಟು ಮತ ಹಂಚಿಕೆ ಪಡೆಯಲಿದ್ದರೆ, ಬಿಜೆಪಿ ಶೇ 39, ಜೆಡಿಎಸ್ ಶೇ 2 ಹಾಗೂ ಪಕ್ಷೇತರರು ಶೇ 4ರಷ್ಟು ಮತ ಹಂಚಿಕೆ ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಮತ್ತೊಂದೆಡೆ, ತಿಪಟೂರಿನಲ್ಲಿ ಬಿಜೆಪಿಯ ಬಿಸಿ ನಾಗೇಶ್ ಶೇ 40ರಷ್ಟು ಮತಗಳು, ಕಾಂಗ್ರೆಸ್ ಶೇ 38, ಜೆಡಿಎಸ್ ಶೇ 16 ಹಾಗೂ ಪಕ್ಷೇತರರು ಶೇ 7ರಷ್ಟು ಮತ ಗಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಸ್​​ಟಿ ಸೋಮಶೇಖರ್ ಶೇ 35ರಷ್ಟು ಮತ ಗಳಿಸಲಿದ್ದಾರೆ. ಕಾಂಗ್ರೆಸ್​ಗೆ ಶೇ 30, ಜೆಡಿಎಸ್​ಗೆ ಶೇ 32 ಹಾಗೂ ಪಕ್ಷೇತರರಿಗೆ ಶೇ 03ರಷ್ಟು ಮತ ದೊರೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಮೇಲುಕೋಟೆಯಲ್ಲಿ ಜೆಡಿಎಸ್​ನ ಸಿಎಸ್​ ಪುಟ್ಟರಾಜು ಅವರಿಗೆ ಶೇ 45, ಕಾಂಗ್ರೆಸ್​ಗೆ ಶೇ 12, ಬಿಜೆಪಿಗೆ ಶೇ 03 ಹಾಗೂ ಪಕ್ಷೇತರರಿಗೆ ಶೇ 40ರಷ್ಟು ಮತ ದೊರೆಯಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಇದನ್ನೂ ಓದಿ: Pre-Poll Survey: ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ಲಸ್; ಲೋಕ್​ ಪೋಲ್ ಸಮೀಕ್ಷೆ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಸ್ಪಷ್ಟ ಬಹುಮತ ದೊರೆಯಲಿದೆ. ಆಡಳಿತಾರೂಢ ಬಿಜೆಪಿಯು 2018ರಲ್ಲಿ ಪಡೆದದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್​​ಗೆ ಶೇ 39ರಿಂದ 42ರ ಮತ ಹಂಚಿಕೆಯೊಂದಿಗೆ 116ರಿಂದ 122 ಸ್ಥಾನ ದೊರೆಯಲಿದೆ. ಬಿಜೆಪಿಗೆ 77ರಿಂದ 83 ಹಾಗೂ ಜೆಡಿಎಸ್​​ 21ರಿಂದ 27 ಸ್ಥಾನ ಗಳಿಸಲಿವೆ. ಪಕ್ಷೇತರರು ಮತ್ತು ಸ್ವತಂತ್ರ ಅಭ್ಯರ್ಥಿಗಳು ಶೇ 6ರಿಂದ 9ರ ಮತ ಹಂಚಿಕೆಯೊಂದಿಗೆ 1ರಿಂದ 4 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಇತ್ತೀಚೆಗೆ ತಿಳಿಸಿತ್ತು.

ಇನ್ನಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ