ಬ್ಯಾಡಗಿ; ಚುನಾವಣೆ ಗೆದ್ದು ಬನ್ನಿ ಎಂದು ಸಿದ್ದರಾಮಯ್ಯಗೆ 25 ಸಾವಿರ ರೂ. ನೀಡಿದ ಬಾಲಕ

ಗಣಪತಿ ಶರ್ಮ

|

Updated on: Mar 14, 2023 | 10:34 PM

ಪುಟ್ಟ ಬಾಲಕನೊಬ್ಬ ಚುನಾವಣೆ ಗೆದ್ದು ಬರುವಂತೆ ಶುಭ ಹಾರೈಸಿ ಸಿದ್ದರಾಮಯ್ಯ ಅವರಿಗೇ 25,000 ರೂ. ಹಣ ನೀಡಿದ್ದಾನೆ. ಬಾಲಕನ ಪ್ರೇಮಕ್ಕೆ ಮನಸೋತ ಸಿದ್ದರಾಮಯ್ಯ, ಹಣ ಸ್ವೀಕರಿಸಿ ಧನ್ಯವಾದ ಅರುಹಿ ಹಸ್ತಲಾಘವ ನೀಡಿದ್ದಾರೆ.

ಬ್ಯಾಡಗಿಯಲ್ಲಿ ಕಾಂಗ್ರೆಸ್ (Congress) ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದು, ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದಾರೆ. ಅಭಿಮಾನಿಗಳು ಅವರಿಗೆ ಸಾಲು ಸಾಲಾಗಿ ಸನ್ಮಾನ ಮಾಡಿದ ಅಭಿನಂದಿಸಿದರು. ಇದೇ ವೇಳೆ ಪುಟ್ಟ ಬಾಲಕನೊಬ್ಬ ಚುನಾವಣೆ ಗೆದ್ದು ಬರುವಂತೆ ಶುಭ ಹಾರೈಸಿ ಸಿದ್ದರಾಮಯ್ಯ ಅವರಿಗೇ 25,000 ರೂ. ಹಣ ನೀಡಿದ್ದಾನೆ. ಬಾಲಕ ಹೊಸಗುಂಗರಕೊಪ್ಪ ಗ್ರಾಮದ ಪಂಚಾಯತಿ ಸದಸ್ಯರ ಮಗ ಎಂಬುದು ತಿಳಿದುಬಂದಿದೆ. ಬಾಲಕನ ಪ್ರೇಮಕ್ಕೆ ಮನಸೋತ ಸಿದ್ದರಾಮಯ್ಯ, ಹಣ ಸ್ವೀಕರಿಸಿ ಧನ್ಯವಾದ ಅರುಹಿ ಹಸ್ತಲಾಘವ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada