Kabzaa Movie: ‘ಕಬ್ಜ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ತಾರೆಯರ ಸಂಗಮ; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

|

Updated on:Mar 14, 2023 | 8:17 PM

Kabzaa Pre-release Event: ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ​ ಚಂದನವನದ ಅನೇಕ ಸ್ಟಾರ್​ ಕಲಾವಿದರು ಹಾಜರಿ ಹಾಕಿದ್ದಾರೆ. ಎಲ್ಲರೂ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ (Kabzaa Movie) ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ವಿಶ್ವಾದ್ಯಂತ 4 ಸಾವಿರ ಪರದೆಗಳು ಮುಡಿಪಾಗಿವೆ. ಉಪೇಂದ್ರ (Upendra), ಶ್ರೀಯಾ ಶರಣ್​, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಮುಂತಾದವರು ನಟಿಸಿರುವ ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಇಂದು (ಮಾರ್ಚ್​ 14) ಬೆಂಗಳೂರಿನಲ್ಲಿ ‘ಕಬ್ಜ’ ಪ್ರೀ-ರಿಲೀಸ್​ ಇವೆಂಟ್ (Kabzaa Movie Pre-release Event)​ ನಡೆಯುತ್ತಿದೆ. ಚಂದನವನದ ಅನೇಕ ಸ್ಟಾರ್​ ಕಲಾವಿದರು ಇದರಲ್ಲಿ ಭಾಗಿ ಆಗಿದ್ದಾರೆ. ಸಿನಿಮಾದ ವಿಶೇಷತೆಗಳ ಬಗ್ಗೆ, ನಿರ್ದೇಶಕ ಆರ್​. ಚಂದ್ರು ಅವರ ಕೆಲಸದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಕಾರ್ಯಕ್ರಮದ ಲೈವ್​ ವಿಡಿಯೋ ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada