Kabzaa: ‘ಕೆಜಿಎಫ್’ ಜೊತೆ ‘ಕಬ್ಜ’ ಹೋಲಿಕೆ ಬೇಡ: ಕಾರಣ ನೀಡಿದ ಉಪೇಂದ್ರ

ಕೆಜಿಎಫ್ ಸಿನಿಮಾದೊಂದಿಗೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ ಎಂದು ನಟ ಉಪೇಂದ್ರ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಉಪ್ಪಿ ನೀಡಿದ್ದಾರೆ.

Kabzaa: 'ಕೆಜಿಎಫ್' ಜೊತೆ 'ಕಬ್ಜ' ಹೋಲಿಕೆ ಬೇಡ: ಕಾರಣ ನೀಡಿದ ಉಪೇಂದ್ರ
ಕಬ್ಜ
Follow us
ಮಂಜುನಾಥ ಸಿ.
| Updated By: Digi Tech Desk

Updated on:Mar 09, 2023 | 5:40 PM

ಉಪೇಂದ್ರ (Upendra) ನಟಿಸಿ, ಆರ್ ಚಂದ್ರು (R Chandru) ನಿರ್ದೇಶನ ಮಾಡಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ (Kabzaa) ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಉಪೇಂದ್ರ, ಸುದೀಪ್, ನಾಯಕಿ ಶ್ರೆಯಾ ಶಿರಿನ್ ಇನ್ನಿತರರು ಮುಂಬೈನಲ್ಲಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದ ಟೀಸರ್, ಟ್ರೈಲರ್ ನೋಡಿದ ಬಹುತೇಕರು ಇದು ಮತ್ತೊಂದು ಕೆಜಿಎಫ್ ಎಂದಿದ್ದರು, ಆದರೆ ಇದನ್ನು ಅಲ್ಲಗಳೆದಿರುವ ಉಪೇಂದ್ರ, ‘ಕೆಜಿಎಫ್’ ಜೊತೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ ಎಂದಿದ್ದಾರೆ.

ಮುಂಬೈನಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಉಪೇಂದ್ರ, ”ಕೆಜಿಎಫ್’ ಸಿನಿಮಾದೊಂದಿಗೆ ‘ಕಬ್ಜ’ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ-ಬೇರೆ ಸಿನಿಮಾಗಳು. ಟೀಸರ್ ನೋಡಿದ ಹಲವರು ‘ಕೆಜಿಎಫ್’ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಸಿನಿಮಾದ ಲುಕ್, ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು” ಎಂದಿದ್ದಾರೆ.

ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ‘ಕೆಜಿಎಫ್’ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು, ಆಗ ಮಾತನಾಡಿದ್ದ ಉಪೇಂದ್ರ, ”ಕೆಜಿಎಫ್’ ಥರ ಸಿನಿಮಾ ಮಾಡಿ ಅಂತಾರೆ, ‘ಕೆಜಿಎಫ್’ ಥರ ಮಾಡಿದರೆ ‘ಕೆಜಿಎಫ್’ ಥರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡ್ತಾರೆ” ಎಂದು ತಮಾಷೆ ಮಾಡಿದ್ದರು.

ಇತ್ತೀಚೆಗೆ ಬಿಡುಗಡೆ ಆದ ಟ್ರೈಲರ್​ನಲ್ಲಿ ‘ಕಬ್ಜ’ ಸಿನಿಮಾದ ಕತೆಯ ಕೆಲವು ಭಾಗಗಳು ರಿವೀಲ್ ಆಗಿದ್ದು ‘ಕೆಜಿಎಫ್’ ಕತೆಗೂ ‘ಕಬ್ಜ’ ಸಿನಿಮಾದ ಕತೆಗೂ ಸಾಕಷ್ಟು ಅಂತರ ಇರುವುದು ತಿಳಿದು ಬರುತ್ತಿದೆ. ‘ಕೆಜಿಎಫ್’ ಸಿನಿಮಾದಲ್ಲಿ ನಾಯಕ ಆರಂಭದಿಂದಲೇ ರೌಡಿ ಆಗಿರುತ್ತಾನೆ. ಆದರೆ ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ ಏರ್​ಪೋರ್ಸ್ ಅಧಿಕಾರಿಯಾಗಿರುತ್ತಾರೆ. ‘ಕಬ್ಜ’ ಸಿನಿಮಾವು ಸ್ವಾತಂತ್ರ್ಯ ಪೂರ್ವದ ಕತೆಯನ್ನು ಹೊಂದಿದೆ. ಆದರೆ ‘ಕೆಜಿಎಫ್’ ಸ್ವಾತಂತ್ರ್ಯಾನಂತರದ ಕತೆಯನ್ನು ಒಳಗೊಂಡಿದೆ. ‘ಕೆಜಿಎಫ್’ ನಲ್ಲಿ ರಾಕಿಭಾಯ್ ಹೊರತಾಗಿ ಇನ್ಯಾವುದೇ ನಾಯಕ ಪಾತ್ರಗಳು ಇರಲಿಲ್ಲ ಆದರೆ ‘ಕಬ್ಜ’ ಸಿನಿಮಾದಲ್ಲಿ ಸುದೀಪ್, ಶಿವಣ್ಣ ಅವರುಗಳು ಮುಖ್ಯ ಪಾತ್ರದಲ್ಲಿದ್ದಾರೆ. ಇನ್ನೂ ಹಲವು ವ್ಯತ್ಯಾಸಗಳು ಎರಡೂ ಸಿನಿಮಾಕ್ಕೆ ಇವೆ.

ಆದರೆ ಕೆಜಿಎಫ್ ಮಾದರಿಯ ಲುಕ್ ಹಾಗೂ ಟೋನ್ ಕಬ್ಜ ಸಿನಿಮಾಕ್ಕೂ ಇದೆ. ಅದೇ ಕಪ್ಪು ಹಿನ್ನೆಲೆಯಲ್ಲಿಯೇ ‘ಕಬ್ಜ’ ಸಿನಿಮಾವನ್ನು ಆರ್ ಚಂದ್ರು ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಆರ್ ಚಂದ್ರು, ”ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದೇ ನಾನು ಈ ಸಿನಿಮಾ ಮಾಡಿದ್ದೇನೆ. ಅದೇ ರೀತಿಯ ಫೀಲ್ ನೀಡುವುದು ನನ್ನ ಉದ್ದೇಶವಾಗಿತ್ತು. ಅದೇ ಮಾದರಿಯ ಫೀಲ್ ತರಲು ಬಹಳ ಶ್ರಮಪಟ್ಟಿದ್ದೇವೆ” ಎಂದಿದ್ದರು. ಆರ್ ಚಂದ್ರು ಶ್ರಮ ಫಲ ನೀಡಿರುವುದು ಟೀಸರ್ ಹಾಗೂ ಟ್ರೈಲರ್​ನಿಂದ ತಿಳಿದು ಬರುತ್ತಿದೆ.

‘ಕಬ್ಜ’ ಸಿನಿಮಾವು ಮಾರ್ಚ್ 17ಕ್ಕೆ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ, ಶ್ರಿಯಾ ಶಿರಿನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ. ಸುದೀಪ್, ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Thu, 9 March 23

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್