Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೋಲಾರದಲ್ಲಿ ಅದ್ದೂರಿ ಸ್ವಾಗತ, ಭಾವೀ ಮುಖ್ಯಮಂತ್ರಿ ಅಂತ ಜೈಕಾರ!

ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೋಲಾರದಲ್ಲಿ ಅದ್ದೂರಿ ಸ್ವಾಗತ, ಭಾವೀ ಮುಖ್ಯಮಂತ್ರಿ ಅಂತ ಜೈಕಾರ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2023 | 12:59 PM

ವಿಜಯೇಂದ್ರ ಅವರನ್ನು ಕಂಡೊಡನೆ ಉತ್ಸಾಹಿತರಾಗುವ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯಣ್ಣಂಗೆ ಜೈ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರಗೆ ಜಯವಾಗಲಿ ಅಂತ ಘೋಷಣೆಗಳನ್ನು ಕೂಗುತ್ತಾರೆ. ಮುನಿಸ್ವಾಮಿ ಶನಿವಾರದಿಂದ ಹೆಚ್ಚಿನ ಸಮಯವನ್ನು ವಿಜಯೇಂದ್ರರೊಂದಿಗೆ ಕಳೆಯುತ್ತಿರುವುದು ಗಮನಿಸಬೇಕಾದ ಸಂಗತಿ.

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ನಗರದ ರಾಮಸಂದ್ರ ಗೇಟ್ ಬಳಿ ಬಂದಾಗ ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ (BY Vijayendra) ಕಾಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ದಾರಿಯುದ್ದಕ್ಕೂ ನೆರೆದಿದ್ದ ಕಾರ್ಯಕರ್ತರು (party workers) ಮತ್ತು ಬೆಂಬಲಿಗರು ಆಳೆತ್ತರದ ಹೂವಿನ ಹಾರ ಹಾಕಿ ಮತ್ತು ಶಾಲುಗಳನ್ನು ಹೊದೆಸಿ ಸನ್ಮಾನಿಸಿದರು. ದೃಶ್ಯಗಳಲ್ಲಿ ಕೋಲಾರ ಸಂಸದ ಎಸ್ ಮುನಿಸ್ವಾಮಿ (S Muniswamy) ಮತ್ತು ವರ್ತೂರು ಪ್ರಕಾಶ್ ರನ್ನು ನೋಡಬಹುದು. ವಿಜಯೇಂದ್ರ ಅವರನ್ನು ಕಂಡೊಡನೆ ಉತ್ಸಾಹಿತರಾಗುವ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯಣ್ಣಂಗೆ ಜೈ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರಗೆ ಜಯವಾಗಲಿ ಅಂತ ಘೋಷಣೆಗಳನ್ನು ಕೂಗುತ್ತಾರೆ. ಮುನಿಸ್ವಾಮಿ ಶನಿವಾರದಿಂದ ಹೆಚ್ಚಿನ ಸಮಯವನ್ನು ವಿಜಯೇಂದ್ರರೊಂದಿಗೆ ಕಳೆಯುತ್ತಿರುವುದು ಗಮನಿಸಬೇಕಾದ ಸಂಗತಿ. ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಿದ್ದನ್ನೇ ವಿಜಯೇಂದ್ರಗೂ ಹೇಳುತ್ತೇವೆ. ಕಾನ್ವಾಯ್ ಹೆಸರಲ್ಲಿ ಹತ್ತಾರು ವಾಹನಗಳನ್ನು ನಿಮ್ಮೊಂದಿಗೆ ಕರೆದೊಯ್ಯಬೇಡಿ, ರಾಜ್ಯವನ್ನು ಭೀಕರ ಬರಗಾಲ ಆವರಿಸಿದೆ, ನೀವು ಪ್ರವಾಸ ಮಾಡಲೇಬೇಕು, ನಿಮಗೆ ಅದು ಅನಿವಾರ್ಯ, ಆದರೆ ನಿಮ್ಮೊಂದಿಗೆ ಸೀಮಿತ ಜನ ಮತ್ತು ವಾಹನಗಳನ್ನು ಕರೆದೊಯ್ಯಿರಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ