ನನ್ನ ಮಗ ಮತ್ತು ನನ್ನನ್ನು ಸಹಕಾರ ಕ್ಷೇತ್ರದಿಂದ ದೂರ ಮಾಡುವ ಪ್ರಯತ್ನ ಸಿದ್ದರಾಮಯ್ಯ ನಡೆಸಿದ್ದಾರೆ: ಜಿಟಿ ದೇವೇಗೌಡ, ಜೆಡಿಎಸ್ ಶಾಸಕ
ಸಿದ್ದರಾಮಯ್ಯ ಏನೇ ಮಾಡಿದರೂ ಸಹಕಾರಿಗಳು ತಮ್ಮ ಜೊತೆ ಇದ್ದಾರೆ, ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಸಿದರೆ ಅವರು ಪುನಃ ತಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ಜನರ ಅಭಿವೃದ್ಧಿಗಾಗಿ ಸಹಕಾರ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ತಾನು ಎಂದು ಜಿಟಿ ದೇವೇಗೌಡ ಹೇಳಿದರು.
ಮೈಸೂರು: ಜೆಡಿಎಸ್ ಪಕ್ಷದ ನಾಯಕ ಜಿಟಿ ದೇವೇಗೌಡ (GT Devegowda) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ನೇಹಿತರೋ ಇಲ್ಲ ವೈರಿಗಳೋ ಅಂತ ಅರ್ಥಮಾಡಿಕೊಳ್ಳುವುದು ಕಷ್ಟ ಮಾರಾಯ್ರೇ. ಮುಖ್ಯಮಂತ್ರಿಯನ್ನು ಗೌಡರು ಒಮ್ಮೆ ಹಾಡಿ ಹೊಗಳಿದರೆ ಮತ್ತೊಮ್ಮೆ ಪಕ್ಕಾ ವೈರಿಯಂತೆ ಮಾತಾಡುತ್ತಾರೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಟಿಡಿ, ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತನ್ನನ್ನು ಹಾಗೂ ತಮ್ಮ ಪುತ್ರ ಹರೀಶ್ ಗೌಡರನ್ನು (Harish Gowda) ಕ್ಷೇತ್ರದಿಂದ ದೂರ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ಹಿಂದೆ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಗೌಡರನ್ನು ಸಹಕಾರ ಕ್ಷೇತ್ರದ ಮಹಾಮಂಡಲದಿಂದ ತೆಗೆದುಹಾಕಿದ್ದರಂತೆ. ಈಗ ಹರೀಶ್ ಗೌಡರನ್ನು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಂದ ತೆಗೆಸುವ ಪ್ರಯತ್ನದಲ್ಲಿದ್ದಾರೆ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಏನೇ ಮಾಡಿದರೂ ಸಹಕಾರಿಗಳು ತಮ್ಮ ಜೊತೆ ಇದ್ದಾರೆ, ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಸಿದರೆ ಅವರು ಪುನಃ ತಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ಜನರ ಅಭಿವೃದ್ಧಿಗಾಗಿ ಸಹಕಾರ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ತಾನು ಎಂದು ಜಿಟಿ ದೇವೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ