ಉಕ್ರೇನ್​ನಲ್ಲಿ ಸಿಲುಕಿರುವ ಮೊಮ್ಮಗನನ್ನು ನೆನೆದು ಬಾಗಲಕೋಟೆಯಲ್ಲಿ ಕಣ್ಣೀರಿಟ್ಟ ಅಜ್ಜಿ

| Updated By: sandhya thejappa

Updated on: Feb 25, 2022 | 11:42 AM

ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ವಿದ್ಯಾರ್ಥಿಯ ಪೋಷಕರು ಲಕ್ಷ್ಮಣ ಸವದಿಗೆ ಮನವಿ ಮಾಡುತ್ತಿದ್ದಾರೆ.

ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆ ಮಹಾಯುದ್ಧ ನಡೆಯುತ್ತಿದೆ. ಪರಿಣಾಮ ಕರ್ನಾಟಕ ರಾಜ್ಯದ ಸುಮಾರು 91 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಪೋಷಕರು ಸದಾ ಮಕ್ಕಳ ಸಂಪರ್ಕದಲ್ಲಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಪೋಷಕರು ಆತಂಕ್ಕೆ ಒಳಗಾಗಿದ್ದು, ಕಣ್ಣೀರಿಡುತ್ತಿದ್ದಾರೆ. ಬಾಗಲಕೋಟೆ ಮೂಲದ ಒವೈಸ್ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾನೆ. ಮೊಮ್ಮಗನ ನೆನೆದು ಅಜ್ಜಿ ಆಯೇಷಾ ಟಿವಿ9 ಮುಂದೆ ಕಣ್ಣೀರಿಟ್ಟಿದ್ದಾರೆ. ಕಣ್ಣಿಗೆ ನಿದ್ದೆಯಿಲ್ಲ, ಊಟ ಸೇರುತ್ತಿಲ್ಲ. ನಮಗೆ ಬಾರಿ ಭಯ ಕಾಡುತ್ತಿದೆ ಎಂದು ಅಜ್ಜಿ ಹೇಳುತ್ತಿದ್ದಾರೆ. ಉಕ್ರೇನ್ನಲ್ಲಿ ಮೆಟ್ರೋ ಅಂಡರ್ ಗ್ರೌಂಡ್​ನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ ಐವರು ಬಾಗಲಕೋಟೆಯವರು.

ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ವಿದ್ಯಾರ್ಥಿಯ ಪೋಷಕರು ಲಕ್ಷ್ಮಣ ಸವದಿಗೆ ಮನವಿ ಮಾಡುತ್ತಿದ್ದಾರೆ. ಕರೆ ಮಾಡಿ ಕಿರಣ್ ಸವದಿ ತಂದೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಹಿಜಾಬ್ ವಿವಾದದಲ್ಲಿ ಬಿಜೆಪಿ ಬಲೆಗೆ ಬೀಳಬೇಡಿ: ಕರ್ನಾಟಕ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಕಿವಿಮಾತು

ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

Published on: Feb 25, 2022 11:41 AM