ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ವಾಪಸ್ಸಾತಿಗಾಗಿ ಎಂಬೇಸಿಯೊಂದಿಗೆ ಸಂಪರ್ಕದಲ್ಲಿದ್ದೇವೆ: ಬೊಮ್ಮಾಯಿ
ವಿದ್ಯಾರ್ಥಿಗಳ ಸುರಕ್ಷತೆ ಬಹಳ ಮುಖ್ಯವಾದದ್ದು ಮತ್ತು ನಮ್ಮ ಆತಂಕವನ್ನು ರಾಯಭಾರಿ ಕಚೇರಿಗೆ ತಿಳಿಸಲಾಗಿದೆ. ವಿಮಾನಗಳ ಹಾರಾಟ ಶುರುವಾದ ಕೂಡಲೇ ಅವರನ್ನು ಸುರಕ್ಷಿತವಾಗಿ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರ ಪೈಕಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವದೇಶಕ್ಕೆ ಹಿಂತಿರುಗಲೆಂದು ವಿಮಾನ ನಿಲ್ದಾಣಕ್ಕೆ (airport) ಬರುವ ಸಂದರ್ಭದಲ್ಲೇ ರಷ್ಯಾ (Russia) ದಾಳಿ ಅರಂಭಿಸಿದ್ದರಿಂದ ವಿಮಾನ ಹಾರಾಟ ರದ್ದುಗೊಂಡ ಕಾರಣ ಏರ್ಪೋರ್ಟ್ಗಳಿಗೆ ಅವರನ್ನು ಹೊತ್ತ್ಯೊಯುತ್ತಿದ್ದ ಬಸ್ಗಳಲ್ಲಿ ಸಿಕ್ಕಿಬಿದ್ದಿರುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಸರ್ಕಾರಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಿಲುಕಿಕೊಂಡಿರುವ ಭಾರತೀಯರ ವಿದ್ಯಾರ್ಥಿಗಳ ಪೈಕಿ 10 ಜನ ಉಕ್ರೇನಲ್ಲಿ (Ukraine) ಓದುತ್ತಿರುವ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಅವರು ಸುರಕ್ಷಿತವಾಗಿ ವಾಪಸ್ಸು ಬರುವುದು ಸಾಧ್ಯವಾಗಲು ಸಂಬಂಧಪಟ್ಟ ಇಲಾಖೆಗಳು, ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ತಮ್ಮ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿದೆಯೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತಾಡಿದ ಬೊಮ್ಮಾಯಿ ಅವರು ಉಕ್ರೇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ವಿದೇಶಾಂಗ ವ್ಯವಹಾರ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸುರಕ್ಷತೆ ಬಹಳ ಮುಖ್ಯವಾದದ್ದು ಮತ್ತು ನಮ್ಮ ಆತಂಕವನ್ನು ರಾಯಭಾರಿ ಕಚೇರಿಗೆ ತಿಳಿಸಲಾಗಿದೆ. ವಿಮಾನಗಳ ಹಾರಾಟ ಶುರುವಾದ ಕೂಡಲೇ ಅವರನ್ನು ಸುರಕ್ಷಿತವಾಗಿ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ನಿಮಗಿದು ಗೊತ್ತೇ?; ಭಾರತದ ಸಹಾಯ ಬೇಡುತ್ತಿರುವ ಇದೇ ಉಕ್ರೇನ್ ವಿಶ್ವಸಂಸ್ಥೆಯಲ್ಲಿ 1998ರ ಅಣ್ವಸ್ತ್ರ ಪರೀಕ್ಷೆಯನ್ನು ಖಂಡಿಸಿತ್ತು