AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಬರಿ ಬೇಡ, ಯಾವುದೇ ಸಮಸ್ಯೆಯಿಲ್ಲ ಅಂತ ಕಲಬುರಗಿಯಲ್ಲಿರುವ ಅಮ್ಮನಿಗೆ ಹೇಳಿದಳು ಉಕ್ರೇನ್​ನಲ್ಲಿ ಓದುತ್ತಿರುವ ಜೀವಿತಾ!

ಗಾಬರಿ ಬೇಡ, ಯಾವುದೇ ಸಮಸ್ಯೆಯಿಲ್ಲ ಅಂತ ಕಲಬುರಗಿಯಲ್ಲಿರುವ ಅಮ್ಮನಿಗೆ ಹೇಳಿದಳು ಉಕ್ರೇನ್​ನಲ್ಲಿ ಓದುತ್ತಿರುವ ಜೀವಿತಾ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 24, 2022 | 8:27 PM

ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿನಿಯ ಹೆಸರು ಜೀವಿತಾ. ಅವರ ತಾಯಿ ಗುಲ್ಬರ್ಗಾ ವಿಶ್ವವಿದ್ಯಾಲಯನಲ್ಲಿ ಜೈವಿಕ ರಾಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ.

ಮಕ್ಕಳು ಓದುತ್ತಿರುವ ದೇಶದಲ್ಲಿ ಯುದ್ಧ ಆರಂಭಗೊಂಡರೆ ಭಾರತಲ್ಲಿರುವ ಅವರ ತಂದೆ ತಾಯಿಗಳಿಗೆ ಆಗುವ ಆತಂಕವನ್ನು ಒಮ್ಮೆ ಊಹಿಸಿ ನೋಡಿ. ಮಕ್ಕಳ ಯೋಚನೆಯಲ್ಲಿ ಅವರಿಗೆ ಊಟ ಮಾಡಲಾಗದು ನಿದ್ರೆಯ ಮಾತಂತೂ ದೂರವೇ ಉಳಿಯಿತು. ಉಕ್ರೇನ್ (Ukraine) ಮೇಲೆ ರಷ್ಯಾ (Russia) ಯುದ್ಧ ಸಾರಿದೆ. ಆ ದೇಶದಲ್ಲಿ 15,000 ಭಾರತೀಯರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಯುದ್ಧ ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳ ಪಾಲಕರು ಗಾಬರಿಯಾಗುತ್ತಿದ್ದಾರೆ. ಅಂಥ ಪಾಲಕರಲ್ಲಿ ಕಲಬುರಗಿಯ (Kalaburgi) ಈ ಮಹಿಳೆ ಸಹ ಒಬ್ಬರು. ಅಂದಹಾಗೆ ಈ ವರದಿಯನ್ನು ಟಿವಿ9 ಕಲಬುರಗಿ ವರದಿಗಾರ ಕಳಿಸಿದ್ದಾರೆ.

ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿನಿಯ ಹೆಸರು ಜೀವಿತಾ. ಅವರ ತಾಯಿ ಗುಲ್ಬರ್ಗಾ ವಿಶ್ವವಿದ್ಯಾಲಯನಲ್ಲಿ ಜೈವಿಕ ರಾಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಅವರೊಂದಿಗೆ ಮಾತಾಡಿ ಜೀವಿತಾಳ ನಂಬರ್ ಪಡೆಯಲು ವರದಿಗಾರರು ಅಲ್ಲಿಗೆ ಹೋದಾಗ ಅವರು ಮಗಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ತಾಯಿ-ಮಗಳು ನಡೆಸುವ ಸಂಭಾಷಣೆಯನ್ನು ಈ ವಿಡಿಯೋನಲ್ಲಿ ನೀವು ಕೇಳಿಸಿಕೊಳ್ಳಬಹುದು.

ಜೀವಿತಾ ಮಾತೃಭಾಷೆ ತೆಲುಗು ಅಗಿದೆ. ವರದಿಗಾರರು ಅಲ್ಲಿಗೆ ಸ್ವಲ್ಪ ಮುಂಚೆ ಜೀವಿತಾ ಅವರೇ ತನ್ನ ತಾಯಿಗೆ ಒಂದು ಮೆಸೇಜ್ ಕಳಿಸಿ ತನಗೇನೂ ತೊಂದರೆಯಿಲ್ಲ, ಆಗಷ್ಟೇ ಒಂದು ಗ್ರೋಸರಿ ಅಂಗಡಿಯಿಂದ ಅಗತ್ಯದ ಸಾಮಾನು ಖರೀದಿಸಿ ಮನೆಗೆ ವಾಪಸ್ಸು ಹೋಗಿದ್ದು ಗಾಬರಿಯಾಗುವ ಅವಶ್ಯಕತೆಯಿಲ್ಲ, ತಾನಿರುವ ಜಾಗದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿದ್ದಾರಂತೆ.

ಜೀವಿತಾಳ ಪೋಷಕರ ಹಾಗೆ ಹಲವಾರು ಪೋಷಕರು ಆತಂಕದಲ್ಲಿದ್ದಾರೆ ಮಾರಾಯ್ರೇ.

ಇದನ್ನೂ ಓದಿ:    Russia Ukraine War ಕೈವ್‌ನಲ್ಲಿ ಕೊರೆಯುವ ಚಳಿಯಲ್ಲಿ ಕಾಯುತ್ತಿರುವ ಭಾರತೀಯರ ವಿಡಿಯೊ ವೈರಲ್; ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?