ಸಂತ್ರಸ್ತ ಬಾಲಕಿಯರ ಬಗ್ಗೆ ಕಾಳಜಿ, ಕನಿಕರಗಳಿಲ್ಲವೇ ಅಂತ ಮಾಧ್ಯಮದವರು ಕೇಳಿದಾಗ ಸ್ವಾಮೀಜಿಗಳ ವೃಂದ ನಿರುತ್ತರವಾಗಿತ್ತು!
ಮುರಘಾ ಶ್ರೀಗಳು ಷಡ್ಯಂತ್ರದಲ್ಲಿ ಸಿಲುಕಿದ್ದಾರೆ ಎಂದು ಒಬ್ಬ ಸ್ವಾಮೀಜಿ ಹೇಳಿದರು. ದಲಿತ ಸಂತ್ರಸ್ತ ಬಾಲಕಿಯ ಬಗ್ಗೆ ಪ್ರಸ್ತಾಪಿಸಿದಾಗ ಮಾದಾರ ಚನ್ನಯ್ಯ ಶ್ರೀಗಳು ಸಹ ಮೌನವಾಗಿದ್ದರು.
ಚಿತ್ರದುರ್ಗ: ಪೋಕ್ಸೋ (POCSO) ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ (Shivamurthy Sharanaru) ಪರ ಬೆಂಬಲ ಸೂಚಿಸಲು ಮಂಗಳವಾರ ಮಠಕ್ಕೆ ಆಗಮಿಸಿದ್ದ ಬೇರೆ ಬೇರೆ ಮಠಗಳ ಸ್ವಾಮೀಜಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪಲಾಯನ ಮಾಡಲು ಮುಂದಾದರು. ಸಂತ್ರಸ್ತ ಬಾಲಕಿಯರ ಬಗ್ಗೆ ನಿಮಗೆ ಕಿಂಚಿತ್ತೂ ಕನಿಕರ, ಕಾಳಜಿ ಇಲ್ಲವೇ? ನೀವೆಲ್ಲ ಸೇರಿ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದೀರಿ ಎಂದು ಮಾಧ್ಯಮದವರು ಕೇಳಿದಾಗ, ಯಾವ ಸ್ವಾಮೀಜಿ ಹತ್ತಿರವೂ ಉತ್ತರ ಇರಲಿಲ್ಲ. ಮುರಘಾ ಶ್ರೀಗಳು ಷಡ್ಯಂತ್ರದಲ್ಲಿ ಸಿಲುಕಿದ್ದಾರೆ ಎಂದು ಒಬ್ಬ ಸ್ವಾಮೀಜಿ ಹೇಳಿದರು. ದಲಿತ ಸಂತ್ರಸ್ತ ಬಾಲಕಿಯ ಬಗ್ಗೆ ಪ್ರಸ್ತಾಪಿಸಿದಾಗ ಮಾದಾರ ಚನ್ನಯ್ಯ ಶ್ರೀಗಳು ಸಹ ಮೌನವಾಗಿದ್ದರು.
Latest Videos