‘ಸುದೀಪ್ ಸರ್ಗೂ ಅದು ಅರ್ಥ ಆದ್ರೆ ಒಳ್ಳೆಯದು’; ಉದಯ್ ಸೂರ್ಯ ನೇರ ಮಾತು
‘ನಾನು ಹೇಳೋಕೆ ಹೊರಟಿದ್ದೇ ಬೇರೆ, ಅದನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ’ ಎಂದು ಉದಯ್ ಹೇಳುತ್ತಲೇ ಬರುತ್ತಿದ್ದಾರೆ.
ಉದಯ್ ಸೂರ್ಯ (Uday Surya) ಅವರು ಬಿಗ್ ಬಾಸ್ ಮನೆಯಿಂದ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುವುದಕ್ಕೂ ಮೊದಲು ಅವರು ವಿವಾದ ಮಾಡಿಕೊಂಡಿದ್ದರು. ಬಹುತೇಕರು ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಕಡಿಮೆ ವೋಟ್ ಪಡೆದು ಅವರು ಮನೆಯಿಂದ ಹೊರ ಬಂದಿದ್ದಾರೆ. ‘ನಾನು ಹೇಳೋಕೆ ಹೊರಟಿದ್ದೇ ಬೇರೆ, ಅದನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ’ ಎಂದು ಉದಯ್ ಹೇಳುತ್ತಲೇ ಬರುತ್ತಿದ್ದಾರೆ. ಅವರು ಟಿವಿ9 ಕನ್ನಡದ ಜತೆಗೆ ಈ ಬಗ್ಗೆ ಮಾತನಾಡಿದ್ದಾರೆ.
Latest Videos