Bagalkot News: ಅಪಾಯದ ಮಟ್ಟ ತಲುಪಿರುವ ಶ್ರಮಬಿಂದು ಸಾಗರ ಬ್ಯಾರೇಜ್ ನಲ್ಲಿ ಯುವಕರ ಸೆಲ್ಫೀ ಹುಚ್ಚಾಟ!
ಇಂಥವರನ್ನು ಅಪಾಯದಿಂದ ಉಳಿಸಲು ಸರ್ಕಾರ ಬ್ಯಾರೇಜ್ ಸುತ್ತ ಬೇಲಿ ಎಬ್ಬಿಸುವುದು ಸಾಧ್ಯವೇ? ಯುವಕರು ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ.
ಬಾಗಲಕೋಟೆ: ಸೆಲ್ಫೀ ಗೀಳಿಗೆ (selfie mania) ಮಿತಿ ಬೇಡ್ವಾ ಸ್ವಾಮಿ? ಯಾರನ್ನು ಮೆಚ್ಚಿಸಲು ಜನ ಹುಚ್ಚು ಸಾಹಸಗಳಿಗಿಳಿಯುತ್ತಾರೋ ಅಂತ ಅರ್ಥವಾಗಲ್ಲ ಮಾರಾಯ್ರೇ. ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಶ್ರಮಬಿಂದು ಸಾಗರ ಬ್ಯಾರೇಜ್ (Shramabindu Sagar Barrage) ಗೊತ್ತಲ್ವಾ? ಆ ಭಾಗದ ರೈತನಾಯಕ ಸಿದ್ದು ನ್ಯಾಮಗೌಡ (Siddu Nyamagouda) ಮತ್ತು ರೈತರ ತಪಸ್ಸು ಹಾಗೂ ಪರಿಶ್ರಮವೇ ಈ ಬ್ಯಾರೇಜ್. ಬಾಗಲಕೋಟೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಾರದಿಂದ ಒಂದೇ ಸಮ ಮಳೆ ಸುರಿಯುತ್ತಿರುವುದರಿಂದ ಶ್ರಮಬಿಂದು ಸಾಗರ ಬ್ಯಾರೇಜ್ ಅಪಾಯದ ಮಟ್ಟ ತಲುಪಿದೆ. ಸೇತುವೆ ಮೇಲಿಂದ ನೀರು ಹರಿಯುತ್ತಿದ್ದರೂ ಕೆಲ ಯುವಕರು ಕೇವಲ ಸೆಲ್ಫೀ ತೆಗೆದುಕೊಳ್ಳುವ ಕಾರಣಕ್ಕಾಗಿ ಸೇತುವೆ ಮೇಲೆ ನಡುಭಾಗಕ್ಕೆ ನಡೆದು ಹೋಗಿದ್ದಾರೆ. ಅವರಲ್ಲಿ ಎಷ್ಟು ಜನಕ್ಕೆ ಈಜುವುದು ಗೊತ್ತು ಅಂತ ನಮಗೆ ಗೊತ್ತಿಲ್ಲ. ಏನಾದರೂ ಹೆಚ್ಚು ಕಡಿಮೆಯಾಗಿ ನೀರಿಗೆ ಬಿದ್ದರೆ, ಜೀವಕ್ಕೆ ಅಪಾಯ. ಇಂಥವರನ್ನು ಅಪಾಯದಿಂದ ಉಳಿಸಲು ಸರ್ಕಾರ ಬ್ಯಾರೇಜ್ ಸುತ್ತ ಬೇಲಿ ಎಬ್ಬಿಸುವುದು ಸಾಧ್ಯವೇ? ಯುವಕರು ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ.
ಮತ್ತಷ್ಟು ವಿಡಿಯೋಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ