AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟ್ ಇಳುಕಲು ಪ್ರದೇಶಗಳ ಸಣ್ಣ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ

ಚಾರ್ಮಾಡಿ ಘಾಟ್ ಇಳುಕಲು ಪ್ರದೇಶಗಳ ಸಣ್ಣ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 01, 2024 | 12:11 PM

Share

ಇದೇ ವಿಡಿಯೋದಲ್ಲಿ ಚಾರ್ಮಾಡಿ ಘಾಟ್ ನ ಬಯಲು ಮತ್ತು ಸುರಕ್ಷಿತ ಪ್ರದೇಶದಲ್ಲಿ ಕೆಲ ಯುವಕರು ಕುನಿಯುತ್ತ ಕುಪ್ಪಳಿಸುತ್ತಿದ್ದಾರೆ. ಇದು ಸೇಫ್ ಮಾರಾಯ್ರೇ. ಆದರೆ ಇಳುಕಲು ಸ್ಥಳಗಳಿಗೆ ಹೋಗಿ ಜಾರುವಂಥ ಬಂಡೆಗಳ ಮೇಲೆ ಮೇಲಿಂದ ಬೀಳುವ ನೀರಿಗೆ ಮೈಯೊಡುವುದು ಅಪಾಯಕ್ಕೂ ಮೈಯೊಡ್ಡಿದ ಹಾಗೆ!

ಚಿಕ್ಕಮಗಳೂರು: ಯುವಕರು ಪ್ರವಾಸ ಹೋಗಲಿ, ಚಾರಣಕ್ಕೆಂ ತೆರಳಲಿ; ಅವರ ತಂದೆತಾಯಿಗಳೇ ತಡೆಯಲ್ಲ ಅಂದ್ರೆ ಬೇರೆಯವರಾದರೂ ಯಾಕೆ ತಡೆದಾರು? ಆದರೆ ಯುವಕರು ಗಮನಿಸಬೇಕಾದ ಅಂಶವೇನೆಂದರೆ ಅವರು ಬೆರಳು ಚೀಪುವ ಮಕ್ಕಳೇನಲ್ಲ, ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕು. ಇಲ್ನೋಡಿ, ಚಾರ್ಮಾಡಿ ಘಾಟ್​  ರಸ್ತೆಗುಂಟ ಸಿಗುವ ಸಣ್ಣಪುಟ್ಟ ಮತ್ತು ಕಿರಿದಾಗಿರುವ ಜಲಪಾತಗಳಲ್ಲಿ ಅವರು ಆಟವಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಇವು ಕಿರಿದಾದ ಜಲಪಾತಗಳು, ಜಲಪಾತಗಳು ಅನ್ನೋದಕ್ಕಿಂತ ಮೇಲಿನಿಂದ ಬೀಳುತ್ತಿರುವ ನೀರಿನ ಝರಿಗಳು ಅಂದರೆ ಹೆಚ್ಚು ಸೂಕ್ತವೇನೋ? ಮೇಲಿನಿಂದ ನೀರು ಸತತವಾಗಿ ಬೀಳುವುದರಿಂದ ಕಲ್ಲು ಬಂಡೆಗಳು ನುಣುಪಾಗಿಬಿಟ್ಟಿರುತ್ತವೆ ಮತ್ತು ಕಾಲಿಟ್ಟರೆ ಜಾರುವ ಅಪಾಯ ಜಾಸ್ತಿ. ಅಂಥ ಕಲ್ಲು ಬಂಡೆಗಳ ಮೇಲೆ ನಿಂತು ಯುವಕರು ಮೋಜು ಮಸ್ತಿ ಮಾಡುತ್ತಿದ್ದಾರೆ. ಕಾಲು ಜಾರಿದರೆ ನೇರವಾಗಿ ಪ್ರಪಾತಕ್ಕೆ, ಭಗವಂತನೂ ರಕ್ಷಿಸಲಾರ. ಇಂಥ ಅಪಾಯಕಾರಿ ಆಟಗಳು ಅವರಿಗೆ ಬೇಕಾ? ಕಿರಿದಾದ ಕಂದರಗಳನ್ನು ಕಾಯುವವರು ಯಾರೂ ಇರಲ್ಲ, ಅಪಾಯಕಾರಿ ಸ್ಥಳಗಳು ಅಂತ ಸೈನೇಜ್ ಗಳನ್ನು ಹಾಕಿದರೆ ಅವುಗಳನ್ನು ಗಮನಿಸುವ ಅಥವಾ ಸೂಚನೆಗಳನ್ನು ಪಾಲಿಸುವ ಕೆಲಸವನ್ನು ಯುವಕರು ಮಾಡಲಾರರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾರ್ಮಾಡಿ ಘಾಟಿಯ ನಡುರಸ್ತೆಯಲ್ಲಿ ನಿಂತು ಘೀಳಿಟ್ಟ ಒಂಟಿ ಸಲಗ, ಬೆಚ್ಚಿ ಬಿದ್ದ ಜನ