ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಿದ್ದರಾಮಯ್ಯ ಸರ್ಕಾರದ ಐದು ಗ್ಯಾರಂಟಿಗಳು ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಮನೆ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ. ಆದ್ರೆ ಹಣ ಹಾಕವುದರಲ್ಲಿ ಕೊಂಚ ವಿಳಂಬವಾಗುತ್ತಿದ್ದು. ಇದಕ್ಕೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 28): ಗೃಹ ಲಕ್ಷ್ಮಿಯ 2000 ರೂ. ಹಣ ಮನೆ ಯಜಮಾನಿಗೆ ಖಾತೆ ಹಾಕವುದರಲ್ಲಿ ಕೊಂಚ ವಿಳಂಬವಾಗುತ್ತಿದೆ. ಒಂದು ತಿಂಗಳ ಹಣ ಖಾತೆಗೆ ಬಿದ್ದಿಲ್ಲ. ಹಲವೆಡೆ ನಮಗೆ ಹಣ ಬಂದಿಲ್ಲ..ನಿಮಗೆ ಹಣ ಬಂದಿಲ್ಲ ಎನ್ನುವ ಮಾತುಗಳು ಜೋರಾಗಿದೆ. ಇನ್ನು ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಪ್ರತಿಕ್ರಿಯಿಸಿ, ಸರ್ಕಾರಿ ನೌಕರರ ಸೇರಿದಂತೆ ಒಂದು ತಿಂಗಳು ಬಿಟ್ಟು ಇನ್ನೊಂದು ತಿಂಗಳು ಹಾಕುತ್ತೇವೆ. ನೀವು ಹೇಳಿದ್ದು ನಿಜ, ಒಂದು ತಿಂಗಳದ್ದು ತಡವಾಗಿದೆ. ಇನ್ನೊಂದು ನಾಲ್ಕೈದು ದಿನದಲ್ಲಿ ಹಣ ಹಾಕುತ್ತೇವೆ. ಆರೋಪ ಮಾಡೋರು ಹಣ ಹಾಕಿದ್ರೆ ಆರೋಪ ಮಾಡುತ್ತಾರೆ. ಹಣ ಹಾಕದಿದ್ದರೂ ಆರೋಪ ಮಾಡಿತ್ತಾರೆ. ಹಾಕಿದ್ತೆ ಎಲೆಕ್ಷನ್ ಸಲುವಾಗಿ ಹಾಕಿದ್ದಾರೆ ಅಂತಾರೆ. ಹಾಗಾಗಿದ್ರೆ ಎಲೆಕ್ಷನ್ ಬಂದಾಗ ಮಾತ್ರ ಹಣ ಹಾಕುತ್ತಿದ್ವಿ/ ಈಗ ಎಲೆಕ್ಷನ್ ಏನಿಲ್ಲವಲ್ಲ ಎಂದು ಸ್ಪಷ್ಟಪಡಿಸಿದರು.
Published on: Nov 28, 2024 07:04 PM