BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಅಂತೆ-ಕಂತೆಗಳಿಗೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳರ್​

BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಅಂತೆ-ಕಂತೆಗಳಿಗೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳರ್​

ರಮೇಶ್ ಬಿ. ಜವಳಗೇರಾ
|

Updated on: Nov 20, 2024 | 3:38 PM

ಬಿಪಿಎಲ್ ಕಾರ್ಡ್, ಬಡವರ ಪಾಲಿನ ಆಶಾಕಿರಣ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲ. ಆದರೆ, ನಿಯಮಾವಳಿಗಳನ್ನೇ ಮೀರಿ ಬಿಪಿಎಲ್​ ಕಾರ್ಡ್​ ಸೌಲಭ್ಯ ಪಡೆಯುತ್ತಿರುವ ಜನರಿಗೆ ಇದೀಗ ಶಾಕ್​ ಎದುರಾಗಿದೆ. ಸದ್ಯ ಕೆಲವರ ಬಿಪಿಎಲ್​ ಕಾರ್ಡ್​ಗಳನ್ನು ಎಪಿಎಲ್​ಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಗೃಹಲಕ್ಷ್ಮೀ ಯೋಜನೆಗೆ ಹೊಡೆತಬೀಳುತ್ತಾ ಎನ್ನುವುದಕ್ಕೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, (ನವೆಂಬರ್ 20): ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್​ದಾರರ ಮೆಗಾ ಆಪರೇಷನ್​ ನಡೆಯುತ್ತಿದೆ. ಅನರ್ಹ ಬಿಪಿಎಲ್ ಕಾರ್ಡ್​ ಫಲಾನುಭವಿಗಳೇ ಹೆಚ್ಚು ಇರುವ ಶಾಕಿಂಗ್ ಮಾಹಿತಿ ಬಯಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ದಾರರು ಇದ್ದಾರೆ ಎಂಬ ಸತ್ಯಸಂಗತಿ ಬಯಲಾಗಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್​ ಇಲಾಖೆ ಮಾಹಿತಿ ಕೊಟ್ಟಿದೆ. ಇನ್ನು ಅವುಗಳನೆಲ್ಲವನ್ನೂ ಇದೀಗ ಬಿಪಿಎಲ್​ನಿಂದ ಎಪಿಎಲ್​ಗೆ ವರ್ಗಾವಣೆ ಮಾಡುವ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ. ಆದ್ರೆ, ಬಿಪಿಎಲ್​ನಿಂದ ಎಪಿಎಲ್​ಗೆ ವರ್ಗಾವಣೆಯಾದರೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಬರುವ ಹಣ ನಿಲ್ಲುತ್ತಾ? ಎನ್ನುವ ಚರ್ಚೆಗಳು ನಡೆದಿದೆ. ಇದೀಗ ಇದಕ್ಕೆ ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿಕ್ರಿಯಿಸಿದ್ದು, ಬಿಪಿಎಲ್​ ಕಾರ್ಡ್​​​ನಿಂದ ಎಪಿಎಲ್​ ಕಾರ್ಡ್​ಗೆ ವರ್ಗಾವಣೆಯಾಗಿದ್ದರೂ ಸಹ ಗೃಹ ಲಕ್ಷ್ಮೀ ಹಣ ಬಂದ್​ ಆಗುವುದಿಲ್ಲ. ಬಿಪಿಎಲ್​ ಜೊತೆ ಎಪಿಎಲ್​ ಕಾರ್ಡ್​ದಾರರಿಗೂ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ,

ಇದನ್ನೂ ಓದಿ: ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್: ಶಾಕಿಂಗ್ ಅಂಕಿಅಂಶ ಬಿಚ್ಚಿಟ್ಟ ಇ ಗವರ್ನೆನ್ಸ್ ಇಲಾಖೆ!