ಮರೆತೇಹೋಗಿದ್ದ ಬೆಂಗಳೂರಿನ ಜೆಡಿ(ಎಸ್) ಕಚೇರಿಗೆ ಕೊನೆಗೂ ಬಂದುಬಿಟ್ಟರು ಜಿಟಿ ದೇವೇಗೌಡ!
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿಯವರು ಜಿಟಿಡಿ ಅವರನ್ನು ಬರಮಾಡಿಕೊಂಡು ಸಿಹಿ ತಿನ್ನಿಸಿದರು.
ಬೆಂಗಳೂರು: ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ (GT Devegowda) ಮತ್ತು ಜೆಡಿ(ಎಸ್) ಪಕ್ಷದ ನಾಯಕತ್ವ ನಡುವಿನ ಮುನಿಸು, ವೈಮನಸ್ಸು ಕಳೆದ ವಾರವೇ ಕೊನೆಗೊಂಡ ಬಗ್ಗೆ ನಾವು ವರದಿ ಮಾಡಿದ್ದೇವೆ. ಬುಧವಾರ ಬೆಂಗಳೂರಿಗೆ (Bengaluru) ಆಗಮಿಸಿದ್ದ ಜಿಟಿಡಿ ಅವರು ಮೂರೂವರೆ ವರ್ಷಗಳ ನಂತರ ಶೇಷಾದ್ರಿಪುರಂನಲ್ಲಿರುವ ತಮ್ಮ ಪಕ್ಷದ ಕಚೇರಿಗೆ ಭೇಟಿ ನೀಡಿದರು. ಹೌದು ಮೂರೂವರೆ ವರ್ಷಗಳ ನಂತರ! ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಜಿಟಿಡಿ ಅವರನ್ನು ಬರಮಾಡಿಕೊಂಡು ಸಿಹಿ ತಿನ್ನಿಸಿದರು.
Published on: Oct 26, 2022 03:00 PM