ಮೈಸೂರು-ಊಟಿ ರಸ್ತೆಯಲ್ಲಿನ ವಿವಾದಿತ ಜೆ ಎಸ್ ಎಸ್ ಬಸ್ ನಿಲ್ದಾಣ ಗುಂಬಜ್ ಗಳ ಬಣ್ಣ ಬದಲು!
ನಿನ್ನೆ ಹೊನ್ನಿನ ಬಣ್ಣ ಹೊದ್ದಿದ್ದ ಅವುಗಳ ಮೇಲೆ ಕಳೆದ ರಾತ್ರಿ ಮೈಸೂರು ಅರಮನೆಗೆ ಹಚ್ಚಿರುವಂಥ ಬಣ್ಣವನ್ನು ಪೂಸಲಾಗಿದೆ.
ಮೈಸೂರಿನ ಜೆ ಎಸ್ ಎಸ್ ಕಾಲೇಜು (JSS College) ಮುಂಭಾಗ ಮತ್ತು ಮೈಸೂರು-ಊಟಿ ರಸ್ತೆಯಲ್ಲಿರುವ ಬಸ್ ತಂಗುದಾಣ (Bus Stop) ಅನುಮತಿಯಿಲ್ಲದೆ ಕಟ್ಟಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಂಬಂಧಪಟ್ಟ ಇಲಾಖೆಗಳಿಗೆ ನೋಟೀಸ್ ಜಾರಿಮಾಡಿದ್ದರೂ ಈ ವಿವಾದಿತ ಬಸ್ ತಾಣ ರಾಜಕೀಯ ಪಕ್ಷಗಳು ಮತ್ತು ಕೆಲ ನಾಯಕರ ಪ್ರತಿಷ್ಠೆಗೆ ಸಿಕ್ಕು ದಿನಕ್ಕೊಂದು ಸ್ವರೂಪ ಮತ್ತು ಕಲರ್ ಪಡೆಯುತ್ತಿದೆ. ಶೆಲ್ಟರ್ ಮೇಲಿನ ಗುಂಬಜ್ ಗಳನ್ನು ಗಮನಿಸಿ. ನಿನ್ನೆ ಹೊನ್ನಿನ ಬಣ್ಣ ಹೊದ್ದಿದ್ದ ಅವುಗಳ ಮೇಲೆ ಕಳೆದ ರಾತ್ರಿ ಮೈಸೂರು ಅರಮನೆಗೆ ಹಚ್ಚಿರುವಂಥ ಬಣ್ಣವನ್ನು ಪೂಸಲಾಗಿದೆ. ನಾಳೆ ಬೆಳಗ್ಗೆ ನಿಲ್ದಾಣ ಮತ್ತೊಂದು ಸ್ವರೂಪ ಪಡೆದರೆ ಆಶ್ಚರ್ಯವಿಲ್ಲ.
Published on: Nov 17, 2022 10:23 AM