ಕುಡಿದು ದೇವಸ್ಥಾನಕ್ಕೆ ಬಂದಿದ್ದ ಅಯ್ಯಪ್ಪ ಮಾಲಾಧಾರಿಗೆ ಗುರು ಸ್ವಾಮಿಯಿಂದ ಕಪಾಳಮೋಕ್ಷ

Edited By: ಆಯೇಷಾ ಬಾನು

Updated on: Dec 31, 2022 | 3:11 PM

ಮದ್ಯ ಸೇವಿಸಿ ದೇವರ ಸನ್ನಿಧನಕ್ಕೆ ತೆರಳಿದ್ದ ವ್ಯಕ್ತಿ ಗುರು ಸ್ವಾಮಿ ಬಳಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುರುಸ್ವಾಮಿ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಕಂಠ ಪೂರ್ತಿ ಕುಡಿದು ದೇವಸ್ಥಾನಕ್ಕೆ ಬಂದಿದ್ದ ಪಾನಮತ್ತ ಸ್ವಾಮಿಗೆ ಗೋಕುಲ ಗ್ರಾಮದ ಅಯ್ತಪ್ಪ ಸ್ವಾಮಿ ದೇವಾಲಯದಲ್ಲಿ ಕಪಾಳಮೋಕ್ಷ ಮಾಡಲಾಗಿದೆ. ಗೋಕುಲದ ಮೋಹನ ಗುರುಸ್ವಾಮಿ ಅವರು ಕುಡಿದು ದೇವಸ್ಥಾನಕ್ಕೆ ಬಂದಿದ್ದ ಮಾಲಾಧಾರಿ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ಕಠಿಣ ವ್ರತ ಮಾಡಬೇಕು. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾಲೆ ಧರಿಸಿ ಕುಡಿದು ಬಂದು ವ್ರತ ಭಂಗ ಮಾಡಿದ್ದ. ಆತನ ಸನಿಹಕ್ಕೆ ಹೋದರೆ ಮದ್ಯದ ವಾಸನೆ ಮೂಗು ಮುಚ್ಚುವಂತಿತ್ತು. ಮದ್ಯ ಸೇವಿಸಿ ದೇವರ ಸನ್ನಿಧನಕ್ಕೆ ತೆರಳಿದ್ದ ವ್ಯಕ್ತಿ ಗುರು ಸ್ವಾಮಿ ಬಳಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುರುಸ್ವಾಮಿ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲೇ ಅಯ್ಯಪ್ಪ ಮಾಲೆ ತೆಗೆಸಿದ್ದಾರೆ. ಕಪ್ಪುಬಟ್ಟೆಯನ್ನೂ ತೆಗೆದು ಕಟ್ಟಿಹಾಕುವಂತೆ ಸೂಚಿಸಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More