ಮೋದಿ ಭಾವಚಿತ್ರವಿರುವ ಬ್ಯಾನರ್ ಹಿಡಿದು 13 ಸಾವಿರ ಅಡಿ ಮೇಲಿಂದ ಧುಮುಕಿದ ಯುವಕರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಪರವಾಗಿ ಯುವಕರು ವಿಶಿಷ್ಟವಾಗಿ ಪ್ರಚಾರ ಮಾಡಿದ್ದಾರೆ. ನಾಲ್ವರು ಮೋದಿ ಅಭಿಮಾನಿಗಳು ನಮೋ ಬ್ರಿಗೇಡ್ 2.0 ಎಂದು ಬರೆದಿರುವ ಬ್ಯಾನರ್ ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ (Narendra Modi) ಪರವಾಗಿ ಯುವಕರು ವಿಶಿಷ್ಟವಾಗಿ ಪ್ರಚಾರ ಮಾಡಿದ್ದಾರೆ. ನಾಲ್ವರು ಮೋದಿ ಅಭಿಮಾನಿಗಳು ನಮೋ ಬ್ರಿಗೇಡ್ 2.O (Namo Brigade 2.O) ಎಂದು ಬರೆದಿರುವ ಬ್ಯಾನರ್ ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿದ್ದಾರೆ. ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ, ಬೆಂಗಳೂರಿನ ರಾಹುಲ ಡಾಕ್ರೆ, ಅನುಭವ ಅಗರವಾಲ್ ಮತ್ತು ಮಹರಾಷ್ಟ್ರದ ಹಿಮಾಂಶು ಸಾಬಳೆ ನಾಲ್ವರು ಬ್ಯಾಂಕಾಕ್ನ ಖಾವ್ಯಾವ್ ಡ್ರಾಪ್ ಝೋನ್ನಿಂದ ಮೋದಿ ಭಾವಚಿತ್ರವಿರು ಬಾವುಟ ಹಿಡಿದುಕೊಂಡು 13,000 ಅಡಿ ಎತ್ತರದಿಂದ ಹಾರಿದ್ದಾರೆ. ರಾಜಶೇಖರ್ ಹಾಗೂ ಅವರ ತಂಡ ಸ್ಕೈಡೈವಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಲತಾಣಲ್ಲಿ ವೈರಲ್ ಆಗಿದೆ.
ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೂ ಸ್ಕೈ ಡೈವಿಂಗ್
ಈ ನಾಲ್ವರು ಯುವಕರು ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೂ ಸ್ಕೈ ಡೈವಿಂಗ್ ಮಾಡಿದ್ದರು. ಕೈಯ್ಯಲ್ಲಿ ಜೈ ಶ್ರೀರಾಮ ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ