ಐದು ದಶಕಗಳ ಸ್ನೇಹಿತ ಶ್ರೀನಿವಾಸ ಪ್ರಸಾದ್ ಗೆ ಕೆಲ ಮಾರ್ಮಿಕ ಪ್ರಶ್ನೆಗಳನ್ನು ಕೇಳಿದ ಹೆಚ್ ವಿಶ್ವನಾಥ
ಹಲವಾರು ಪಕ್ಷಗಳ ಜೊತೆ ಗುರುತಿಸಿಕೊಂಡ ಶ್ರೀನಿವಾಸ ಪ್ರಸಾದ ಅವರೇ ನಿಜವಾದ ಅಲೆಮಾರಿ ಎಂದು ವಿಶ್ವನಾಥ್ ಹೇಳಿದ್ದಾರೆ.
ಮೈಸೂರು: ಬಿಜೆಪಿ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಅವರು ತಮ್ಮ ಪಕ್ಷದವರೇ ಅಗಿರುವ ಹಿರಿಯ ನಾಯಕ ವಿ ಶ್ರೀನಿವಾಸ ಪ್ರಸಾದ (V Srinivas Prasad) ಅವರು ತಮ್ಮನ್ನು ಅಲೆಮಾರಿ ಅಂತ ಹೇಳಿರುವುದಕ್ಕೆ ಬಹಳ ಬೇಜಾರು ಮಾಡಿಕೊಂಡಿದ್ದಾರೆ. ತಮ್ಮನ್ನು ಜೆಡಿ(ಎಸ್) ಪಕ್ಷದಿಂದ ಬಿಜೆಪಿ ಕರೆತರುವ ಮೊದಲು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರ ಮನೆಯಲ್ಲಿ ತಾವಾಡಿದ ಮಾತುಗಳನ್ನೆಲ್ಲ ಪ್ರಸಾದ್ ಮರೆತಿದ್ದಾರೆ ಎಂದು ಹೇಳಿದ ವಿಶ್ವನಾಥ್ ಬಿಜೆಪಿಯ ಹೆಬ್ಬಾಗಿಲಲ್ಲಿ ನಿಲ್ಲಿಸಿ ತಮ್ಮನ್ನು ಕಡಿದವರು ಯಾರು ಅಂತ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಹಲವಾರು ಪಕ್ಷಗಳ ಜೊತೆ ಗುರುತಿಸಿಕೊಂಡ ಶ್ರೀನಿವಾಸ ಪ್ರಸಾದ ಅವರೇ ನಿಜವಾದ ಅಲೆಮಾರಿ ಎಂದು ವಿಶ್ವನಾಥ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 15, 2022 04:08 PM