ಕೊಪ್ಪಳ: ರಾಜ್ಯ ಬಿಜೆಪಿ ನಾಯಕರೊಂದಿಗೆ ಬಿಎಸ್ ಯಡಿಯೂರಪ್ಪ ಮುನಿಸಿಕೊಂಡಿರುವುದು ಸಾರ್ವಜನಿಕವಾಗುತ್ತಿದೆ!
ಆಮೇಲೆ ಬಿಎಸ್ ವೈ ದೂರ ಹೋಗಿರುವುದನ್ನು ಗಮನಿಸುವ ಬೊಮ್ಮಯಿ ಮತ್ತು ಇತರರು ಅವರನ್ನು ಮುಂದಕ್ಕೆ ಕರೆತರುತ್ತಾರೆ.
ಕೊಪ್ಪಳ: ರಾಜ್ಯದ ಬಿಜೆಪಿ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುನಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೊಪ್ಪಳದಲ್ಲಿ ಗುರುವಾರ ನಡೆದ ಜಿಲ್ಲಾ ಕಾರ್ಯಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅದು ಸಾರ್ವಜನಿಕವಾಗಿ ವಿದಿತವಾಯಿತು. ಕಾರ್ಯಕ್ರಮಕ್ಕೆ ಆಗಮಿಸುವ ಯಡಿಯೂರಪ್ಪ ಜನರತ್ತ ನಿರ್ಲಿಪ್ತ ಭಾವದಿಂದ ಕೈ ಬೀಸಿ ದೂರ ಸರಿಯುತ್ತಾರೆ. ಅವರ ಹಿಂದೆ ಬರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅನಂದ ಸಿಂಗ್ ಮೊದಲಾದವರು ವೇದಿಕೆ ಉದ್ದಕ್ಕೂ ಓಡಾಡುತ್ತಾ ಜನರಿಗೆ ಕೈ ಬೀಸುತ್ತಾರೆ. ಆಮೇಲೆ ಬಿಎಸ್ ವೈ ದೂರ ಹೋಗಿರುವುದನ್ನು ಗಮನಿಸುವ ಬೊಮ್ಮಯಿ ಮತ್ತು ಇತರರು ಅವರನ್ನು ಮುಂದಕ್ಕೆ ಕರೆತರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos