ಕಾಂಗ್ರೆಸ್ ಪಕ್ಷವನ್ನು ಸೇರುತ್ತಿಲ್ಲ, ಅದಕ್ಕೆ ಬೆಂಬಲ ನೀಡುತ್ತಿದ್ದೇನೆ ಅಷ್ಟೇ: ಹೆಚ್ ವಿಶ್ವನಾಥ
ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ದಿನವನ್ನು ಅ ಪಕ್ಷದ ನಾಯಕರು ತಿಳಿಸುತ್ತಾರೆ, ಅದು ತಮ್ಮ ಮನೆಯಾಗಿರುವುದರಿಂದ ವಾಪಸ್ಸು ಹೋಗಲು ಯಾವುದೇ ಬೇಡಿಕೆ ಇಲ್ಲ ಎಂದು ಹೇಳುತ್ತಾರೆ!
ಬೆಂಗಳೂರು: ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ (H Vishwanath) ಅವರ ಮಾತನ್ನು ಅರ್ಥಮಾಡಿಕೊಳ್ಳಲು ಬ್ರಹ್ಮನಿಗೂ ಕಷ್ಟವಾಗಬಹುದು. ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ವಿಶ್ವನಾಥ ಕಾಂಗ್ರೆಸ್ ಸೇರ್ಪಡೆಯಾಗಲು ದಿನಾಂಕ ನಿಗದಿಯಾಗಿದೆ ಅಂತ ಹೇಳುತ್ತಾರೆ. ಅದರೆ, ಸಾಯಂಕಾಲ ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡಿರುವ ವಿಶ್ವನಾಥ, ನಾನು ಕಾಂಗ್ರೆಸ್ ಸೇರುತ್ತಿಲ್ಲ, ಆ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇನೆ ಅಂತ ಹೇಳುತ್ತಾರೆ. ಬೆಳಗ್ಗೆ ಶಿವಕುಮಾರ್ ಅವರ ನಿವಾಸಕ್ಕೆ ಹೋಗಿದ್ದನ್ನು ಒಪ್ಪಿಕೊಳ್ಳುವ ಅವರು ಕಾಂಗ್ರೆಸ್ ಪಕ್ಷ ಈಗಲೇ ಸೇರಲು ಕೆಲ ತಾಂತ್ರಿಕ ದೋಷಗಳಿವೆ ಎಂದು ಹೇಳುತ್ತಾರೆ. ಆಮೇಲೆ ಅವರು, ನಾನೀಗ ಸ್ವಂತಂತ್ರ (independent) ವ್ಯಕ್ತಿ, ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಅನ್ನುತ್ತಾರೆ. ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ದಿನವನ್ನು ಅ ಪಕ್ಷದ ನಾಯಕರು ತಿಳಿಸುತ್ತಾರೆ, ಅದು ತಮ್ಮ ಮನೆಯಾಗಿರುವುದರಿಂದ ವಾಪಸ್ಸು ಹೋಗಲು ಯಾವುದೇ ಬೇಡಿಕೆ ಇಲ್ಲ ಎಂದು ಹೇಳುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ