ಸಿಎಂ ಬಿಎಸ್ ಯಡಿಯೂರಪ್ಪಗೆ ಕಿವಿ ಕಚ್ಚೋರು ಸರ್ಕಾರಿ ಜಾಗ ನುಂಗೋರು: ಹೆಚ್. ವಿಶ್ವನಾಥ್ ವಾಗ್ದಾಳಿ
ಸಿಎಂ ಬಿಎಸ್ ಯಡಿಯೂರಪ್ಪಗೆ ಕಿವಿ ಕಚ್ಚೋರು ಸರ್ಕಾರಿ ಜಾಗ ನುಂಗೋರು: ಹೆಚ್. ವಿಶ್ವನಾಥ್ ವಾಗ್ದಾಳಿ
ನಾನು ಬಿಎಸ್‌ವೈ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಮೈಸೂರಿನಲ್ಲಿ ಬಿಜೆಪಿ MLC ಹೆಚ್.ವಿಶ್ವನಾಥ್ ಹೇಳಿಕೆ. ನಾನು ಶಕ್ತಿಪೀಠದಲ್ಲಿ ಕುಳಿತ ಸಿಎಂ ಬಗ್ಗೆ ಮಾತಾಡಿದ್ದೇನೆ. ಶಕ್ತಿಕೇಂದ್ರ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ ಎಂದಿದ್ದೆ. ಆ ಶಕ್ತಿ ಕೇಂದ್ರದ ಕಣ್ಣು, ಕಿವಿ ಬಗ್ಗೆ ಹೇಳಿಕೆ ನೀಡಿದ್ದೆ. ಇಬ್ಬರು ಡಿಸಿಗಳಿಗೆ ಬಾಯಿಮುಚ್ಚಿ ಎನ್ನುವ ಧೈರ್ಯ ಇಲ್ಲ. ಬಾಯಿ ಮುಚ್ಚಿ ಎಂದು ಹೇಳುವ ಧೈರ್ಯ ಸಿಎಂಗೆ ಇಲ್ಲ.
ಶಕುನಿಗಳ ಮಾತು ರೈಲು ಹತ್ತಿಸುವವರ ಮಾತು ಕೇಳಬೇಡಿ. ಇದನ್ನು ಹೇಳಿದ್ದು ತಪ್ಪಾ? ನನ್ನ ರಾಜಕೀಯ ಚರಿತ್ರೆ ಏನು?. ಅವರ ರಾಜಕೀಯ ಚರಿತ್ರೆ ಏನು ಎಂದ ಹೆಚ್.ವಿಶ್ವನಾಥ್. ಮಠ ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಿ. ಮಠಗಳಿಗೆ ಕೊಟ್ಟಿರುವ ದೇಣಿಗೆಯನ್ನು ಈಗ ವಾಪಸ್ ಕೇಳಿ. ಸಹಾಯ ಕೇಳುವಂತೆ ಸಿಎಂಗೆ ಹೆಚ್.ವಿಶ್ವನಾಥ್ ಸಲಹೆ
(h vishwanath statement on cm bs yediyurappa)