ಯಡಿಯೂರಪ್ಪಗೆ ಕಣ್ಣು-ಕಿವಿ ಸರಿಯಿಲ್ಲ, ಹೇಳಿದ್ದು ಅರ್ಥ ಆಗಲ್ಲ; ಸುಧಾಕರ್​ ವಸ್ತ್ರಾಪಹರಣಗೊಂಡ ದ್ರೌಪದಿ ಇದ್ದಂಗೆ: ಹೆಚ್​.ವಿಶ್ವನಾಥ್

ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಹೋದ ಖಾತೆಗಳು ಸತ್ತು ಹೋಗುತ್ತವೆ. ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಹೇಳಿದ್ದು ಅರ್ಥ ಆಗಲ್ಲ. ಒಂದು ದಿನವೂ ಯಡಿಯೂರಪ್ಪ ಬಿಬಿಎಂಪಿಗೆ ಹೋಗಿಲ್ಲ. ಇತ್ತ ಆರೋಗ್ಯ ಸಚಿವ ಸುಧಾಕರ್​ ಪರಿಸ್ಥಿತಿ ಈಗ ದ್ರೌಪದಿ ವಸ್ತ್ರಾಪಹರಣ ಮಾಡಿದಂತೆ ಆಗಿದೆ: ಹೆಚ್​.ವಿಶ್ವನಾಥ್

ಯಡಿಯೂರಪ್ಪಗೆ ಕಣ್ಣು-ಕಿವಿ ಸರಿಯಿಲ್ಲ, ಹೇಳಿದ್ದು ಅರ್ಥ ಆಗಲ್ಲ; ಸುಧಾಕರ್​ ವಸ್ತ್ರಾಪಹರಣಗೊಂಡ ದ್ರೌಪದಿ ಇದ್ದಂಗೆ: ಹೆಚ್​.ವಿಶ್ವನಾಥ್
ಹೆಚ್.ವಿಶ್ವನಾಥ್​
Follow us
Skanda
|

Updated on: May 05, 2021 | 2:30 PM

ಮೈಸೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಜಾಸ್ತಿಯಾಗಿ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ನಿನ್ನೆ (ಮೇ.4) ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಪಕ್ಷದ ಮೂವರು ಶಾಸಕರು ಧ್ವನಿ ಎತ್ತಿದ್ದರು. ಇದೀಗ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ತಮ್ಮದೇ ಸರ್ಕಾರದ ವಿರುದ್ಧ ವಾಚಾಮಗೋಚರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಹೇಳಿದ್ದು ಅರ್ಥ ಆಗಲ್ಲ. ಇಂತಹವರನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ ಹೇಳಿ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಹೋದ ಖಾತೆಗಳು ಸತ್ತು ಹೋಗುತ್ತವೆ. ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಹೇಳಿದ್ದು ಅರ್ಥ ಆಗಲ್ಲ. ಒಂದು ದಿನವೂ ಯಡಿಯೂರಪ್ಪ ಬಿಬಿಎಂಪಿಗೆ ಹೋಗಿಲ್ಲ. ಸಭೆ ಕೂಡಾ ನಡೆಸಿಲ್ಲ. ಹೀಗಿದ್ದ ಮೇಲೆ ಅವರಿಗೆ ಆ ಖಾತೆ ಏಕೆ? ಇಷ್ಟೆಲ್ಲಾ ಬೆಳವಣಿಗೆಗೆ, ಬಿಬಿಎಂಪಿ ಬೆಡ್ ಅವ್ಯವಹಾರಕ್ಕೆ ಯಡಿಯೂರಪ್ಪ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ದೆಸೆಯಿಂದಲೇ ಇದೆಲ್ಲಾ ಆಗಿದ್ದು. ಆತ 10 ಪರ್ಸೆಂಟ್ ಗುಪ್ತಾ. ಯಡಿಯೂರಪ್ಪ ಎಲ್ಲವನ್ನೂ ತಮ್ಮ ಬಳಿ ಇಟ್ಟುಕೊಂಡಿದ್ದರಿಂದಲೇ ಈ ಪರಿಸ್ಥಿತಿ ಉದ್ಭವವಾಗಿದೆ ಎಂದು ಕಿಡಿಕಾರಿದ್ದಾರೆ.

ಕೊರೊನಾ ನಿರ್ವಹಣೆಗೆ ಐದು ಜನ ಸಚಿವರನ್ನು ನೇಮಕ ಮಾಡಿರುವ ವಿಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಿ, ಆರೋಗ್ಯ ಸಚಿವ ಸುಧಾಕರ್​ ಅವರಿಂದ ಎಲ್ಲಾ ಅಧಿಕಾರ ಕಿತ್ತುಕೊಂಡರು. ಅವರ ಪರಿಸ್ಥಿತಿ ಈಗ ದ್ರೌಪದಿ ವಸ್ತ್ರಾಪಹರಣ ಮಾಡಿದಂತೆ ಆಗಿದೆ. ಅವರ ಅಧಿಕಾರವನ್ನು ಜಗದೀಶ ಶೆಟ್ಟರ್, ಅಶ್ವತ್ಥ ನಾರಾಯಣ, ಆರ್​.ಅಶೋಕ್​ಗೆ ಕೊಟ್ಟಿದ್ದಾರೆ. ಇವತ್ತು ಆ‌ ಸುಧಾಕರ್ ಬಳಿ ನೀನು ಏನು ಅಂದ್ರೆ? ಹೆಲ್ತ್ ಮಿನಿಸ್ಟರ್ ಎನ್ನಬೇಕು ಅಷ್ಟೇ. ಆತನ ಬಳಿ ಬೇರೆ ಏನು ಅಧಿಕಾರ ಇಲ್ಲ. ಇಷ್ಟಕ್ಕೂ ಇದು ಕಮಿಟಿ ಮಾಡುವ ಸಮಯವಲ್ಲ. ಹಿಂದೆಯೇ ಇದನ್ನು ಮಾಡಿದ್ದರೆ ಅನುಕೂಲವಾಗುತಿತ್ತು ಎಂದು ಎಂಎಲ್‌ಸಿ ವಿಶ್ವನಾಥ್ ರಾಜ್ಯ ಸರ್ಕಾರವನ್ನು, ಸ್ವಪಕ್ಷ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Covid Curfew: ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ ಯಾವ ಸಚಿವರಿಗೆ ಯಾವ ಹೊಣೆಗಾರಿಕೆ ನೀಡಿದರು? ಇಲ್ಲಿದೆ ವಿವರ 

12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ – ಸಂಸದ ತೇಜಸ್ವಿ ಸೂರ್ಯ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್