ಸುರೇಶ್ ಹೆಬ್ಳೀಕರ್ ಹೆಸರು ಬಳಸಿ ವಂಚನೆಗೆ ಯತ್ನ, ಎಚ್ಚರಿಕೆ ಎಂದ ಹಿರಿಯ ನಟ
Suresh Heblikar: 'ಅಲೆಮನೆ', 'ಪಲ್ಲವಿ ಅನುಪಲ್ಲವಿ' ಸೇರಿದಂತೆ ಇನ್ನು ಹಲವು ಐಕಾನಿಕ್ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಸುರೇಶ್ ಹೆಬ್ಳೀಕರ್ ಅವರಿಗೆ ಹ್ಯಾಕರ್ಗಳ ಕಾಟ ಎದುರಾಗಿದೆ. ಸುರೇಶ್ ಅವರ ಇ-ಮೇಲ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಅವರ ಹೆಸರಲ್ಲಿ ಅವರ ಗೆಳೆಯರಿಗೆ ಮೇಲ್ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ ಸುರೇಶ್ ಹೆಬ್ಳೀಕರ್, ‘ಅಲೆಮನೆ’, ‘ಪಲ್ಲವಿ ಅನುಪಲ್ಲವಿ’ ಇನ್ನೂ ಹಲವು ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಸುರೇಶ್ ಹೆಬ್ಳೀಕರ್ ಬೆಂಗಳೂರಿನಿಂದ ದೂರವಾಗಿ, ಆಗಾಗ್ಗೆ ನಟನೆ ಮಾಡುತ್ತಾ ಜೊತೆಗೆ ವಾಚ್ ಸಂಸ್ಥೆಯೊಂದನ್ನು ಸಹ ನಡೆಸುತ್ತಿದ್ದಾರೆ. ಆದರೆ ಸುರೇಶ್ ಹೆಬ್ಳೀಕರ್ ಅವರಿಗೆ ಹ್ಯಾಕರ್ಗಳ ಕಾಟ ಎದುರಾಗಿದೆ. ಸುರೇಶ್ ಹೆಬ್ಳೀಕರ್ ಅವರ ಇ-ಮೇಲ್ ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಸುರೇಶ್ ಹೆಬ್ಳೀಕರ್ ಅವರ ಹೆಸರಿನಲ್ಲಿ ಹಲವರಿಗೆ ಇ-ಮೇಲ್ ಕಳಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರದ ಹೆಚ್ಚಾಗಿದ್ದು ಅಲ್ಲಿನ ಜನರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದು ದೇಣಿಗೆ ನೀಡಿ ಎಂದು ಸುರೇಶ್ ಹೆಸರಲ್ಲಿ ಅವರ ಗೆಳೆಯರಿಗೆ ಮೇಲ್ ಮಾಡಿ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಢಿ ಕರೆದು ಮಾಹಿತಿ ನೀಡಿದ ಸುರೇಶ್ ಹೆಬ್ಳೀಕರ್ ಅವರು ತಮ್ಮ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರೆ ನಿರ್ಲಕ್ಷಿಸಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ