‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..

Updated on: Sep 02, 2026 | 9:39 PM

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ ‘ಹಳ್ಳಿ ಪವರ್ ರಿಲೋಡೆಡ್’ ಶೋನ ಸೆಟ್ ಹಾಕಲಾಗಿದೆ. ಉತ್ತರ ಕರ್ನಾಟಕ ಶೈಲಿಯ ವಾಡಿ ಮನೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ‌ ವಾಡಿ ಮನೆಯ ಸೆಟ್ ಹೇಗಿದೆ ಎಂಬುದರ ವಿವರ ಈ ವಿಡಿಯೋದಲ್ಲಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ ‘ಹಳ್ಳಿ ಪವರ್ ರಿಲೋಡೆಡ್’ ಶೋನ ಸೆಟ್ ಹಾಕಲಾಗಿದೆ. ಉತ್ತರ ಕರ್ನಾಟಕ ಶೈಲಿಯ ವಾಡಿ ಮನೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ‌ ವಾಡಿ ಮನೆಯ ಸೆಟ್ ಹೇಗಿದೆ ಎಂಬುದರ ವಿವರ ಈ ವಿಡಿಯೋದಲ್ಲಿದೆ. ಪಕ್ಕಾ ಉತ್ತರಕರ್ನಾಟಕ ಮಾದರಿಯ ತೇಗಿನ ಮಡಿಗೆ ಮನೆಗಳ ರೀತಿ ಈ ವಾಡಿ ಮನೆ ತಲೆ ಎತ್ತಿದೆ. ಮನೆಯಲ್ಲಿ ಮಂಚ ಕೌದಿ ಬಾಗಿಲು, ಅಡುಗೆ ಮನೆ, ಒಲೆ, ಗೋಡೆಯ ಗುಣ್ಣುಗಳು ಸೇರಿದಂತೆ ಎಲ್ಲವೂ ದೇಶಿ ಸ್ಟೈಲ್‌ನಲ್ಲಿ ನಿರ್ಮಾಣ ಆಗಿದೆ. ಮನೆಯ ಕಾಂಪೌಂಡ್ ಕೂಡ ಜನಪದ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ದನಗಳು, ದನದ ಕೊಟ್ಟಿಗೆ, ಮೇವಿನ ಬಣವಿ, ಬಾವಿ, ಸ್ಪರ್ಧಿಗಳ ಸೆರೆಮನೆ ಕೂಡ ನಿರ್ಮಾಣವಾಗಿದೆ. ಟಾಸ್ಕ್ ಎಲ್ಲಿ ನಡೆಯುತ್ತದೆ? ಸ್ಪರ್ಧಿಗಳು ಎಲ್ಲಿ ಉಳಿದುಕೊಳ್ಳಲಿದ್ದಾರೆ? ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಜಾಗ ಯಾವುದು ಎಂಬಿತ್ಯಾದಿ ಎಲ್ಲ ವಿವರಗಳು ಇಲ್ಲಿವೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More