AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ, ಆಗಿದ್ದೇನು?

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ, ಆಗಿದ್ದೇನು?

ಪ್ರಶಾಂತ್​ ಬಿ.
| Edited By: |

Updated on:Apr 23, 2026 | 10:29 PM

Share

ಇನ್ನೇನು ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದ ವಡೇರಹಳ್ಳಿ ಬಳಿ ನಡೆದಿದೆ. ವಿಶೇಷ ಚೇತನರಿಗೆ ನೀಡಲು ಸರ್ಕಾರದ CSR ಅನುದಾನದಡಿಯಲ್ಲಿ ಟೊಯೋಟಾ ಕಂಪನಿಯ 4 ಚಕ್ರದ 32 ವಾಹನಗಳನ್ನು ಖರೀದಿಸಿ ಭೋಜರಾಜ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿತ್ತು. ಆದ್ರೆ, ಇಂದು (ಏಪ್ರಿಲ್ 23) ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಚಕ್ರದ 32 ವಾಹನಗಳ ಪೈಕಿ 10 ವಾಹನಗಳು ಸುಟ್ಟು ಭಸ್ಮವಾಗಿವೆ.

ರಾಮನಗರ, (ಏಪ್ರಿಲ್ 23): ಇನ್ನೇನು ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ದಕ್ಷಿಣ (Bengaluru South) ‌ಜಿಲ್ಲೆ ರಾಮನಗರದ (ramanagara) ವಡೇರಹಳ್ಳಿ ಬಳಿ ನಡೆದಿದೆ. ವಿಶೇಷ ಚೇತನರಿಗೆ ನೀಡಲು ಸರ್ಕಾರದ CSR ಅನುದಾನದಡಿಯಲ್ಲಿ ಟೊಯೋಟಾ ಕಂಪನಿಯ 4 ಚಕ್ರದ 32 ವಾಹನಗಳನ್ನು ಖರೀದಿಸಿ ಭೋಜರಾಜ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿತ್ತು. ಆದ್ರೆ, ಇಂದು (ಏಪ್ರಿಲ್ 23) ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಚಕ್ರದ 32 ವಾಹನಗಳ ಪೈಕಿ 10 ವಾಹನಗಳು ಸುಟ್ಟು ಭಸ್ಮವಾಗಿವೆ.

ಇನ್ನೇನು ಕೆಲವೇ ದಿನಗಳಲ್ಲಿ ವಿಶೇಷ ಚೇತನರಿಗೆ ಈ ವಾಹನಗಳನ್ನು ಹಸ್ತಾಂತರಿಸಬೇಕಿತ್ತು. ಆದ್ರೆ, ದುರದೃಷ್ಟವಶಾತ್ ಅವರ ಕೈ ಸೇರುವ ಮೊದಲೇ ಬೆಂಕಿಗೆ ಆಹುತಿಯಾಗಿವೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಬೆಂಕಿ ಹೇಗೆ ಕಾಣಿಸಿಕೊಂಡಿದೆ? ಯಾರಾದ್ರೂ ಬೆಕಂತಲೇ ಹಚ್ಚಿದ್ದಾರಾ ಎನ್ನುವ ಬಗ್ಗೆಯೂ ತನಿಖೆಯಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 23, 2026 10:29 PM
Follow Us