ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..

Updated on: Jan 19, 2025 | 3:26 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಕೊನೇ ವಾರದ ಪಂಚಾಯಿತಿ ನಡೆದಿದೆ. ಯಾರು ಕಥೆ ಹಿಟ್? ಯಾರ ಕಥೆ ಫ್ಲಾಪ್ ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ರಜತ್ ಫ್ಲಾಪ್ ಎಂದು ಹನುಮಂತ ಹೇಳಿದ್ದಾರೆ. ಹಾಡಿನ ಮೂಲಕವೇ ರಜತ್​ಗೆ ಹನುಮಂತ ತಿರುಗೇಟು ನೀಡಿದ್ದಾರೆ. ಹನುಮಂತನ ಮಾತು ಕೇಳಿ ರಜತ್ ಕಂಗಾಲಾಗಿದ್ದಾರೆ.

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸಿಲ್ಲಿ ಕಾರಣಗಳನ್ನು ಕೊಟ್ಟು ನಾಮಿನೇಟ್ ಮಾಡುತ್ತಾರೆ ಎಂಬುದು ರಜತ್ ವಾದ. ಆ ಮಾತಿಗೆ ಹನುಮಂತ ತಿರುಗೇಟು ನೀಡಿದ್ದಾರೆ. ‘ಮೊದಲು ಸಿಲ್ಲಿ ಕಾರಣಗಳನ್ನು ಅರ್ಥ ಮಾಡಿಕೊ, ಆಮೇಲೆ ಸ್ಟ್ರಾಂಗ್ ಕಾರಣ ಕೊಡುತ್ತೇನೆ’ ಎಂದು ಹನುಮಂತ ಹೇಳಿದ್ದು ಕೇಳಿ ರಜತ್​ಗೆ ಕಂಗಾಲಾಗಿದೆ. ಸುದೀಪ್​ ಅವರು ಜೋರಾಗಿ ನಕ್ಕಿದ್ದಾರೆ. ಜನವರಿ 19ರ ಸಂಚಿಕೆಯ ಪ್ರೊಮೋ ಇದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 19, 2025 03:20 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More