ಕೆಅರ್ ಮಾರ್ಕೆಟ್ ಫ್ಲೈಓವರ್ ಮೇಲೆ ಅಡ್ಡಾದಿಡ್ಡಿ ಕಾರುಗಳ ಪಾರ್ಕಿಂಗ್, ವಾಹನಸವಾರರಿಗೆ ತೊಂದರೆ!

Updated on: Aug 07, 2025 | 10:36 AM

ನಾನು, ನಂದು, ನನ್ನನ್ನು ಯಾರು ಕೇಳೋರು ಎಂಬ ಸ್ವಾರ್ಥ, ದರ್ಪ, ದುರಹಂಕಾರ ಮತ್ತು ವಿವೇಕಹೀನತೆ ಜನರನ್ನು ಹೀಗೆ ಮಾಡಿಸುತ್ತದೆ. ನಗರದಲ್ಲಿ ಟ್ರಾಫಿಕ್ ಜಾಮ್ ಆಗೋದಕ್ಕಿರುವ ಕಾರಣಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಕೂಡ ಒಂದು. ಇದು ಪ್ರಮುಖ ರಸ್ತೆ, ವೇರೆ ವಾಹನ ಸವಾರರಿಗೆ ತೊಂದರೆಯಾದೀತು ಎಂಬ ಬೇಸಿಕ್ ಸೆನ್ಸ್ ಕೂಡ ಇಲ್ಲದೇ ಹೋದರೆ ಹೇಗೆ? ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು.

ಬೆಂಗಳೂರು, ಆಗಸ್ಟ್ 7: ನಾಳೆ ದಕ್ಷಿಣ ಕರ್ನಾಟಕ ಭಾಗದ ಬಹುದೊಡ್ಡ ವರಮಹಾಲಕ್ಷ್ಮಿ ಹಬ್ಬ (Varamahalakshmi Habba). ಈ ಪ್ರಯುಕ್ತ ಜನ ಇವತ್ತೇ ಅಗತ್ಯ ವಸ್ತುಗಳ ಖರೀದಿಗಾಗಿ ಅದರಲ್ಲೂ ವಿಶೇಷವಾಗಿ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ನಗರದ ಐಕಾನಿಕ್ ಕೆಆರ್ ಮಾರ್ಕೆಟ್​ಗೆ ಲಗ್ಗೆಯಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಖರೀದಿಯ ವಿಹಂಗಮ ದೃಶ್ಯವನ್ನು ನೋಡಬಹುದು. ಅದರೆ ಈ ವಿಡಿಯೋದಲ್ಲಿ ನಾವು ತೋರಿಸಬಯಸುತ್ತಿರುವುದು ನಗರದ ಜನರ ಐಕಾನಿಕ್ ಮೂರ್ಖತನ ಮತ್ತು ಡೆವಿಲ್ ಮೇ ಕೇರ್ ಧೋರಣೆ. ಮಾರ್ಕೆಟ್ ಮೇಲೆ ನಿರ್ಮಿಸಲಾಗಿರುವ ಫ್ಲೈಓವರ್ ಕಾರ್ಪೋರೇಷನ್, ಜೆಸಿ ರೋಡ್, ಕಲಾಸಿಪಾಳ್ಯ, ಟೌನ್ ಹಾಲ್ ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆದರೆ, ರಸ್ತೆಯ ಮೇಲೆ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕ್​ ಮಾಡಲಾಗಿದೆ. ಒಬ್ಬನಂತೂ ತನ್ನ ಕಾರು ಮಾಡಲು ರಸ್ತೆಯನ್ನೇ ಕಬಳಿಸಿಬಿಟ್ಟಿದ್ದಾನೆ, ಟ್ರಾಫಿಕ್ ಪೊಲೀಸರು ಈ ಕಾರಿನ ಎಲ್ಲ ನಾಲ್ಕು ಟೈರ್​ಗಳನ್ನು ಡಿಫ್ಲೇಟ್ ಇಲ್ಲವೇ ಪಂಕ್ಚರ್ ಮಾಡಿದಾಗಲೇ ಮಾಲೀಕನಿಗೆ ತಪ್ಪಿನ ಅರಿವಾಗೋದು.

ಇದನ್ನೂ ಓದಿ: ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಸುತ್ತಮುತ್ತ ಪಾರ್ಕಿಂಗ್ ಜಂಜಾಟ: ಶಕ್ತಿಸೌಧಕ್ಕೂ ತಟ್ಟಿದ ಬಿಸಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ