‘ವಿವಾಹದ ಬಳಿಕ ಹರಿಪ್ರಿಯಾ ಮೇನ್​ಸ್ಟ್ರೀಮ್​ನಿಂದ ದೂರ ಸರಿದರು’; ಭಾವನಾ ರಾಮಣ್ಣ ಬೇಸರ

Updated on: Jul 07, 2025 | 12:29 PM

ಸಿನಿಮಾ ರಂಗದಲ್ಲಿ ಆ್ಯಕ್ಟ್ ಮಾಡೋರು ಮದುವೆ ಆದರೆ ಕಷ್ಟಗಳು ಹೆಚ್ಚು. ಅವರು ವಿವಾಹ ಆದ ಬಳಿಕ ಬೇಡಿಕೆ ಕಡಿಮೆ ಆಗುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇದನ್ನು ನಟಿ ಭಾವನಾ ರಾಮಣ್ಣ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ವಿವಾಹ ಆಗದೆ ಅವರು ಮಗು ಪಡೆಯುತ್ತಾ ಇದ್ದಾರೆ.

ಭಾವನಾ ರಾಮಣ್ಣ (Bhavana Ramanna) ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮದುವೆ ಆಗದೆ ಮಗು ಪಡೆಯುತ್ತಿದ್ದಾರೆ. ಚಿತ್ರರಂಗದವರು ಮದುವೆ ಆದರೆ ಎದುರಾಗುವ ಸಮಸ್ಯೆ ಬಗ್ಗೆ ಅವರು ಹೇಳಿದ್ದಾರೆ. ‘ಚಿತ್ರರಂಗದವರಿಗೆ ಎಲ್ಲಾ ಕ್ಷೇತ್ರದವರ ಜೊತೆ ಬಾಂಧವ್ಯ ಬೆಳೆದಿರುತ್ತದೆ. ನಾವು ಹಣ ನೋಡಿರುತ್ತೇವೆ. ಕೆಲಸ ಮಾಡುವವರ ಜೊತೆ ಆಪ್ತತೆ ಬೆಳೆದಿರುತ್ತದೆ. ಅದನ್ನು ಯಾರೂ ಮುಚ್ಚುಮರೆ ಮಾಡಲ್ಲ. ನಾವು ಆಪ್ತರಿಗೆ ಹಗ್ ನೀಡುತ್ತೇವೆ. ಪುರುಷನಿಗೆ ಪತ್ನಿ ಕಲಾವಿದೆ ಅನ್ನೋದು ಮರೆತು ಹೋಗಿರುತ್ತದೆ. ಅವಳು ಕೇವಲ ಪತ್ನಿ ಆಗಿ ಮಾತ್ರ ಕಾಣುತ್ತಾ ಇರುತ್ತಾರೆ. ಹರಿಪ್ರಿಯಾ ಇನ್ನೂ ಯಂಗ್. ಅವರು ಮೇನ್​ಸ್ಟ್ರೀಮ್​ನಿಂದ ಹೊರ ಹೋಗಿದ್ದಾರೆ. ಮದುವೆ ಆದ ಬಳಿಕ ಅವರು ಸೈಡ್​ಲೈನ್ ಆದರು’ ಎಂದು ಬೇಸರ ಹೊರಹಾಕಿದ್ದಾರೆ ಭಾವನಾ ರಾಮಣ್ಣ .

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More