ಅಣ್ಣ ಹರ್ಷ ಬಿಜೆಪಿ ಸೇರಿದ್ದು ಆಶ್ಚರ್ಯ ತಂದಿಲ್ಲ, ಮೊದಲಿಂದಲೂ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು: ಸಂಯುಕ್ತಾ ಪಾಟೀಲ್
ಕುಟುಂಬಕ್ಕಾಗಲಿ ಪಕ್ಷಕ್ಕಾಗಲಿ ಮುಜುಗುರ ಉಂಟಾಗುವ ಸ್ಥಿತಿಯೇನೂ ನಿರ್ಮಾಣವಾಗಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಮಗೆ ಇಷ್ಟವಾಗುವ ಪಕ್ಷವನ್ನು ಆಯ್ಕೆಮಾಡಿಕೊಳ್ಳುವ ಮತ್ತು ನಿಷ್ಠೆ ಪ್ರದರ್ಶಿಸುವ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದು ಸಂಯುಕ್ತಾ ಹೇಳಿದರು. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಹರ್ಷಗೌಡ ಅವರ ತಂದೆ ಮತ್ತು ಸಂಯುಕ್ತಾ ದೊಡ್ಡಪ್ಪ ಶಿವಶರಣಗೌಡ ಪಾಟೀಲ್ ಸಂಯುಕ್ತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಬಾಗಲಕೋಟೆ: ತನ್ನ ಕಸಿನ್ ಹರ್ಷಗೌಡ ಪಾಟೀಲ್ (Harsha Gouda Patil) ನಿನ್ನೆ ಬಿಜೆಪಿ ಸೇರಿದ್ದು ಜನರಿಗೆ ಮತ್ತು ಮಾಧ್ಯಮಗಳಿಗೆ ಹೊಸ ವಿಷಯ ಅನಿಸಬಹುದು ಆದರೆ ಅವರು ಬಹಳ ವರ್ಷಗಳಿಂದ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (Samyukta Patil) ಹೇಳಿದರು. ಕ್ಷೇತ್ರದಲ್ಲಿ ಇಂದು ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಬಾಗಲಕೋಟೆ ಟವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ಅಣ್ಣ ಹರ್ಷಗೌಡ ಪಾಟೀಲ್ ಅವರು ಸೋಶಿಯಲ್ ಮೀಡಿಯ ಪೋಸ್ಟ್ ಗಳನ್ನು (social media posts) ನೋಡಿದರೆ ಗೊತ್ತಾಗುತ್ತದೆ. ಅವರು ಕೇವಲ ಬಿಜೆಪಿ ನಾಯಕರು ಮತ್ತು ಪಕ್ಷದ ಪರವಾದ ಪೋಸ್ಟರ್ ಗಳನ್ನು ಶೇರ್ ಮಾಡಿದ್ದಾರೆ, ಅವರು ಬಿಜೆಪಿ ಸೇರಿರುವುದು ತಮ್ಮ ಕುಟುಂಬಕ್ಕೆ ಆಸ್ಚರ್ಯವೇನೂ ತಂದಿಲ್ಲ, ಬಿಜೆಪಿ ನಾಯಕರ ಜೊತೆ ಒಡನಾಟವಿಟ್ಟುಕೊಂಡಿದ್ದು ಗೊತ್ತಿತ್ತು ಎಂದರು. ಕುಟುಂಬಕ್ಕಾಗಲಿ ಪಕ್ಷಕ್ಕಾಗಲಿ ಮುಜುಗುರ ಉಂಟಾಗುವ ಸ್ಥಿತಿಯೇನೂ ನಿರ್ಮಾಣವಾಗಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಮಗೆ ಇಷ್ಟವಾಗುವ ಪಕ್ಷವನ್ನು ಆಯ್ಕೆಮಾಡಿಕೊಳ್ಳುವ ಮತ್ತು ನಿಷ್ಠೆ ಪ್ರದರ್ಶಿಸುವ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದು ಹೇಳಿದರು. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಹರ್ಷಗೌಡ ಅವರ ತಂದೆ ಮತ್ತು ಸಂಯುಕ್ತಾ ದೊಡ್ಡಪ್ಪ ಶಿವಶರಣಗೌಡ ಪಾಟೀಲ್ ಸಂಯುಕ್ತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಯುಕ್ತಾ ಪಾಟೀಲ್ ಪರ ಪ್ರಚಾರಕ್ಕೆ ಹೋಗುತ್ತಿಲ್ಲ, ಪತಿ ಹೇಳಿದ್ದು ಸಹ ಸುಳ್ಳು: ವೀಣಾ ಕಾಶಪ್ಪನವರ್