ವಿವಾಹಕ್ಕೂ ಮುನ್ನ ಗೃಹಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ-ಭುವನ್; ಹೇಗಿದೆ ನೋಡಿ ಹೊಸ ಮನೆ
ಈ ತೋಟದ ಮನೆ ತುಂಬ ಸುಂದರವಾಗಿದೆ. ಕೊಡವ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಹರ್ಷಿಕಾ ಪೂಣಚ್ಚ ಅವರು ಪ್ರವೇಶ ಮಾಡಿದ್ದಾರೆ. ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಈ ಪ್ರೇಮಿಗಳು ಈಗ ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನ ಖ್ಯಾತ ನಟಿ ಹರ್ಷಿಕಾ ಪೂಣ್ಣಚ್ಚ (Harshika Poonacha) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟ ಭುವನ್ ಪೊನ್ನಣ್ಣ ಜೊತೆ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೂ ಮೊದಲು ಹರ್ಷಿಕಾ ಮತ್ತು ಭುವನ್ ಗೃಹಪ್ರವೇಶ (House Warming Ceremony) ಮಾಡಿದ್ದಾರೆ. ಭಾವಿ ಪತ್ನಿಗಾಗಿ ಭುವನ್ ಅವರು ಕೊಡಗಿನಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಈ ತೋಟದ ಮನೆ ತುಂಬ ಸುಂದರವಾಗಿದೆ. ಕೊಡವ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಹರ್ಷಿಕಾ ಪ್ರವೇಶ ಮಾಡಿದ್ದಾರೆ. ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಜೋಡಿ ಹಕ್ಕಿಗಳ ಬಹುಕಾಲದ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ. ಆಗಸ್ಟ್ 23 ಮತ್ತು 24ರಂದು ಅವರ ಮದುವೆ ನಡೆಯಲಿದೆ. ಇಬ್ಬರೂ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಹೊಸ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.