ಸಮ್ಮಿಶ್ರ ಸರ್ಕಾರ ಉರುಳಿಸುವಾಗ ಸಿಟಿ ರವಿಗೆ ನವರಂಗಿತನ ನೆನಪಾಗಲಿಲ್ಲವೇ? ಶಿವರಾಜ ತಂಗಡಗಿ

ರಾಜ್ಯದಲ್ಲಿ ಬರಗಾಲ ಘೋಷಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ತಂಗಡಗಿ, ಮುಖ್ಯಮಂತ್ರಿಗಳು ಈಗಾಗಲೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ ಮತ್ತು ಪ್ರಧಾನ ಮಂತ್ರಿಯವರಿಗೂ ಪತ್ರವೊಂದನ್ನು ಬರೆದು ಮಾರ್ಗಸೂಚಿ ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಉರುಳಿಸುವಾಗ ಸಿಟಿ ರವಿಗೆ ನವರಂಗಿತನ ನೆನಪಾಗಲಿಲ್ಲವೇ? ಶಿವರಾಜ ತಂಗಡಗಿ
|

Updated on: Aug 22, 2023 | 4:35 PM

ಧಾರವಾಡ: ಡಿಕೆ ಶಿವಕುಮಾರ್ (DK Shivakumar) ಅವರನ್ನು ನವರಂಗಿ ಅಂತ ಕರೆದಿರುವ ಬಿಜೆಪಿ ನಾಯಕ ಸಿಟಿ ರವಿಗೆ (CT Ravi) ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ (Shivaraj Tangadigi) ತಿರುಗೇಟು ನೀಡಿದ್ದಾರೆ. ಹಿಂದೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಾಗ ನವರಂಗಿತನ, ಲಜ್ಜೆಗೇಡಿತನ ರವಿಗೆ ಭಾಸವಾಗಲಿಲ್ಲವೇ? ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ಇರುತ್ತೋ ಬಿಡುತ್ತೋ ಎಂಬ ಚಿಂತೆ ಇಲ್ಲವೇ ಇಲ್ಲ ಎಂದ ತಂಗಡಗಿ ಅಸಲಿಗೆ ಬಿಜೆಪಿಯಲ್ಲಿರುವ ಶಾಸಕರಿಗೆ ಅಭದ್ರತೆ ಕಾಡುತ್ತಿದೆ. ಭವಿಷ್ಯದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ನೆಲೆಯಿಲ್ಲ ಅನ್ನೋದು ಅವರಿಗೆ ಮನವರಿಕೆಯಾಗಿದೆ. ಹಾಗಾಗೇ, ಅವರು ತಮ್ಮ ಭವಿಷ್ಯವನ್ನು ಭದ್ರಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ತಮ್ಮಲ್ಲಿಗೆ ಬರುತ್ತಿದ್ದಾರೆ ಎಂದು ಸಚಿವ ಹೇಳಿದರು. ರಾಜ್ಯದಲ್ಲಿ ಬರಗಾಲ ಘೋಷಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ತಂಗಡಗಿ, ಮುಖ್ಯಮಂತ್ರಿಗಳು ಈಗಾಗಲೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ ಮತ್ತು ಪ್ರಧಾನ ಮಂತ್ರಿಯವರಿಗೂ ಪತ್ರವೊಂದನ್ನು ಬರೆದು ಮಾರ್ಗಸೂಚಿ ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us