ಕಾಂಗ್ರೆಸ್ ಯಾಕೆ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಅಂತ ಚೆನ್ನಾಗಿ ಗೊತ್ತು: ಹೆಚ್ ಡಿ ಕುಮಾರಸ್ವಾಮಿ
ಅವರು ಹೇಳೋದೇನೆಂದರೆ, ಕಾಂಗ್ರೆಸ್ ಪಕ್ಷದ ಸುಮಾರು 30 ಶಾಸಕರು ಪಕ್ಷ ಬಿಡಲು ತಯಾರಾಗಿದ್ದರಂತೆ. ಅವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಂತೆ.
ಬೆಂಗಳೂರು: ರಾಜಕೀಯ ವಿದ್ಯಮಾನ ಯಾವುದೇ ಆಗಿರಲಿ, ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾರೆ. ಇಂದು ಬೆಂಗಳೂರಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಜೆಡಿಎಸ್ ಪಕ್ಷದ 10 ಶಾಸಕರು (JDS MLAs) ಸಹ ಕಾಂಗ್ರೆಸ್ ಸೇರುವ ಹವಣಿಕೆಯಲ್ಲಿದ್ದಾರಂತಲ್ಲ ಅಂತ ಕೇಳಿದ ಪ್ರಶ್ನೆಗೆ; ಅವರು, ಇಲ್ಲ ನನ್ನ ಪಕ್ಷದ ಯಾವುದೇ ಶಾಸಕ ಬೇರೆ ಪಕ್ಷಕ್ಕೆ ಹೋಗುತ್ತಿಲ್ಲ ಅಂತ ಹೇಳಿದ್ದರೆ ವಿಷಯ ಅಲ್ಲಿಗೆ ಮುಗಿದಿರುತಿತ್ತು. ಆದರೆ ಮುಂದುವರಿದು ಮಾತಾಡುವ ಅವರು ಕಾಂಗ್ರೆಸ್ (Congress) ಯಾಕೆ ಬೇರೆ ಪಕ್ಷದ ಶಾಸಕರಿಗೆ ಗಾಳ ಹಾಕುತ್ತಿದೆ ಅಂತ ವಿಶ್ಲೇಷಣೆ ನೀಡುತ್ತಾರೆ. ಅವರು ಹೇಳೋದೇನೆಂದರೆ, ಕಾಂಗ್ರೆಸ್ ಪಕ್ಷದ ಸುಮಾರು 30 ಶಾಸಕರು ಪಕ್ಷ ಬಿಡಲು ತಯಾರಾಗಿದ್ದರಂತೆ. ಅವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಂತೆ. ಅಸಲಿಗೆ ಎರಡು ತಿಂಗಳು ಹಿಂದೆಯೇ ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಹುನ್ನಾರ ನಡೆಸಿದ್ದು, ಅಧಿಕಾರದ ಲಾಲಸೆ ಇಟ್ಟುಕೊಳ್ಳದೆ ಬರುವವರಿಗೆ ಸ್ವಾಗತವಿದೆ ಅಂತ ಕಾಂಗ್ರೆಸ್ ನಾಯಕರು ಹೇಳಿದಾಕ್ಷಣ ಅವರು ಹಿಂದೆ ಸರಿದಿದ್ದು ಒಂದು ಬಹಿರಂಗ ರಹಸ್ಯ, ಅದು ಕನ್ನಡಿಗರಿಗೆ ಗೊತ್ತಿಲ್ಲವೆಂದು ಕುಮಾರಸ್ವಾಮಿ ಭಾವಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ