‘ಯು ಟರ್ನ್ ಕುಮಾರ ಕಾಣೆಯಾಗಿದ್ದಾರೆ’; ಹೆಚ್ಡಿ ಕುಮಾರಸ್ವಾಮಿ ಫೋಟೋ ಹಾಕಿ ಪೋಸ್ಟ್ ಮಾಡಿದ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಬೆಂಬಲಿಗರು
ಉಭಯ ನಾಯಕರ ಅಭಿಮಾನಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಶ್ರಿನಿವಾಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ತುಮಕೂರು: ರಾಜ್ಯಸಭಾ ಚುನಾವಣಾ ದಿನದಿಂದ ಜೆಡಿಎಸ್ ಗುಬ್ಬಿ ಶಾಸಕ ಶ್ರೀನಿವಾಸ್ (SR Srinivas) ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ನಡುವೆ ಟಾಕ್ ವಾರ್ ನಡೆಯುತ್ತಿದೆ. ಜೊತೆಗೆ ಇಬ್ಬರ ಬೆಂಬಲಿಗರ ನಡುವೆ ಸಮರ ತಾರಕ್ಕೇರಿದೆ. ಉಭಯ ನಾಯಕರ ಅಭಿಮಾನಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಶ್ರಿನಿವಾಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ. ನಿನ್ನೆಯಷ್ಟೆ ಕುಮಾರಸ್ವಾಮಿ ತಿಥಿ ಕಾರ್ಡ್ ವೈರಲ್ ಆದ ಬೆನ್ನಲ್ಲೆ ಮತ್ತೊಂದು ಪೋಟೋವನ್ನು ವೈರಲ್ ಮಾಡಿದ್ದಾರೆ.
‘ಯು ಟರ್ನ್ ಕುಮಾರ ಕಾಣೆಯಾಗಿದ್ದಾರೆ’ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರ ಫೋಟೋ ಹಾಕಿ ಎಸ್ಆರ್ ಶ್ರಿನಿವಾಸ್ ಗುಬ್ಬಿ ಎಂಎಲ್ಎ ಫ್ಯಾನ್ಸ್ ಕ್ಲಬ್ ಫೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗೆ ದಿನಕ್ಕೊಂದು ಪೋಸ್ಟ್ಗಳನ್ನ ಹಾಕುವುದರ ಮೂಲಕ ಹೆಚ್ಡಿಕೆ ವಿರುದ್ಧ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?
ಶ್ರಿನಿವಾಸ್ ಬೆಂಬಲಿಗರಿಂದ ಕುಮಾರಸ್ವಾಮಿಗೆ ಸವಾಲ್! ಇನ್ನು ನಿನ್ನೆ (ಜೂನ್ 12) ಕುಮಾರಸ್ವಾಮಿಗೆ ಶ್ರಿನಿವಾಸ್ ಬೆಂಬಲಿಗರು ಸವಾಲ್ ಹಾಕಿದ್ದಾರೆ. ಎಲ್ಲೋ ಕುತ್ಕಂಡು ಮಾತಾಡೋದಲ್ಲ, ತಾಕತ್ ಇದ್ದರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೊರ್ಸಿ ಎಂದು ಕುಮಾರಸ್ವಾಮಿಗೆ ಫೇಸ್ಬುಕ್ ಪೇಜ್ನಲ್ಲಿ ಬಹಿರಂಗ ಸವಾಲ್ ಹಾಕಿದ್ದಾರೆ.
ನಾವು ಗುಬ್ಬಿ ವಾಸಣ್ಞನ ಹುಡುಗರು, ಕಾರ್ಯಕರ್ತರು. ನೀವು ಎಷ್ಟೇ ಹೇಳಿದ್ರು ಶಕ್ತಿಯುತವಾಗಿ ವಾಸಣ್ಣ ಬೆಳಿತಾರೆ. ಬೆಳಸ್ತೀವಿ. ನೀವಾಗಿ ನೀವೇ ನಮ್ಮ ವಾಸಣ್ಣನನ್ನ ಸ್ಟೇಟ್ ಲೀಡರ್ ಮಾಡಿದಿರಿ. ಅವರಿಗೆ ನಿಮ್ಮ ಆಶಿರ್ವಾದ ಇರುತ್ತೆ. ಇನ್ನು ಅವರನ್ನ ನಾವು ಕೈಹಿಡಿದು ಉನ್ನತ ಸ್ಥಾನಗಳಿಗೆ ಕರ್ಕೊಂಡು ಹೊಗುತ್ತೇವೆ. ಯಾರು ಏನೇ ಹೇಳಿದ್ರು ನಾವು ಯಾವತ್ತು ವಾಸಣ್ಣನನ್ನ ಬಿಟ್ಟು ಕೊಡಲ್ಲ. ಇಂತಹ ರಾಜಕಾರಣಕ್ಕೆ ನಾವು ಬಗ್ಗೋರಲ್ಲ. ಗುಬ್ಬಿ ಜನ, ಯಾವತ್ತು ವಾಸಣ್ಣನನ್ನ ಕೈಬಿಟ್ಟಿಲ್ಲ. ಬಿಡೋದು ಇಲ್ಲ. ನಿಮ್ಮಂತ ಎಷ್ಟೇ ಕುಮಾರಸ್ವಾಮಿಗಳು ಬಂದ್ರು ಅಷ್ಟೇ, ವಾಸಣ್ಣಗೆ ಅವರಿಗ್ಯಾರು ಸರಿಸಾಟಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:10 am, Mon, 13 June 22