ಸ್ವಾಮೀಜಿಗಳ ನಡೆ ಮೂಲ ಅನುಭವ ಮಂಟಪದ ಕಡೆ ಹೋರಾಟ: ಪ್ರಧಾನಿ ಮೋದಿ ಭೇಟಿಗೆ ಮಠಾಧೀಶರ ಚಿಂತನೆ
ಧಾನಿ ಭೇಟಿಯಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿಸಲು ಚಿಂತನೆ ನಡೆಯುತ್ತಿದ್ದು, ಹಲವು ಬಾರಿ ಅನುಭವ ಮಂಟಪದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ಕಲಬುರಗಿ: ಸ್ವಾಮೀಜಿಗಳ ನಡೆ ಮೂಲ ಅನುಭವ ಮಂಟಪದ (Anubhav Mantapa) ಕಡೆ ಹೋರಾಟ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ಸ್ವಾಮೀಜಿಗಳು ಚಿಂತನೆ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣ (Basavkalyan) ಪಟ್ಟಣದಲ್ಲಿರುವಪೀರ್ ಪಾಷಾ ದರ್ಗಾ ಮೂಲ ಅನುಭವ ಮಂಟಪ ಎಂದು ಶ್ರೀಗಳು ಹೇಳುತ್ತಿದ್ದಾರೆ. ಪ್ರಧಾನಿ ಭೇಟಿಯಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿಸಲು ಚಿಂತನೆ ನಡೆಯುತ್ತಿದ್ದು, ಹಲವು ಬಾರಿ ಅನುಭವ ಮಂಟಪದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ನಿನ್ನೆ ಬಸವಕಲ್ಯಾಣದ ಬಿಕೆಡಿಬಿ ಸಭಾಭವನದಲ್ಲಿ ಚಿಂತನ ಮಂಥನ ಸಭೆ ನಡೆದಿದೆ. ಸಭೆಯಲ್ಲಿ ಮಠಾಧೀಶರು ಪ್ರಮುಖ 3 ನಿರ್ಣಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Teeth: ಹಲ್ಲು ನೋವಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
ಮೂರು ಪ್ರಮುಖ ನಿರ್ಣಯ
ಮಠಾಧೀಶರು ನಡೆ ಮೂಲ ಅನುಭವ ಮಂಟಪ ಕಡೆ ಹೋರಾಟದ ಅಂಗವಾಗಿ ಬಸವಕಲ್ಯಾಣ ಪಟ್ಟಣದಲ್ಲಿ ಮಠಾಧೀಶರ ಚಿಂತನ ಮಂಥನ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಡಿಸಿ ಮೂಲಕ ಪ್ರಧಾನಿ, ಸಿಎಂ ಅವರಿಗೆ ಮನವಿ ಕಳುಹಿಸಲಾಗಿದೆ. ಸ್ವಾಮೀಜಿಗಳ ನಿಯೋಗ ಪ್ರಧಾನಿಯವರನ್ನೂ ಭೇಟಿ ಮಾಡಲಿದೆ. ಅದಕ್ಕಾಗಿ ಪ್ರಧಾನಮಂತ್ರಿಗಳ ಸಮಯವನ್ನೂ ಕೇಳಲಾಗಿದೆ.ಸರ್ಕಾರಕ್ಕೆ ವಿಜಯ ದಶಮಿವರೆಗೂ ಕಾಲಾವಕಾಶ ನೀಡಿದ್ದೇವೆ. ಏನೂ ಕ್ರಮಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸಲಾಗುತ್ತದೆ ಎಂದು ಟಿವಿ9ಗೆ ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಪೀರ್ ಪಾಷಾ ಮಸೀದಿಯೇ ಅನುಭವ ಮಂಟಪ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ
ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪವಿದ್ದು, ಅದು ಎಲ್ಲಿದೆ ಎಂದು ಎಲ್ಲರಿಗೂ ಇದೀಗ ಗೊತ್ತಾಗಿದೆ. ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಪುರಾತತ್ವ ಇಲಾಖೆ ಮೂಲಕ ಪರಿಶೀಲನೆ ನಡೆಸಬೇಕು. ಮೂಲ ಅನುಭವ ಮಂಟಪದ ದರ್ಶನಕ್ಕೆ ಅವಕಾಶ ನೀಡಬೇಕು. ಪೀರ್ ಪಾಷಾ ಮಸೀದಿಯೇ ಅನುಭವ ಮಂಟಪ ಎಂದು ಬಸವಕಲ್ಯಾಣ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸ್ವಾಮೀಜಿಗಳ ನಡೆ ಮೂಲ ಅನುಭವ ಮಂಟಪದ ಕಡೆ ಸಮಾವೇಶಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಶ್ರೀರಾಮಸೇನೆ ಸಂಘಟನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗೈರಾಗಿದ್ದರು.
200ಕ್ಕೂ ಹೆಚ್ಚು ಮಠಾಧೀಶರು ಭಾಗಿ
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಶ್ರೀಗಳು ಜಿಲ್ಲೆಗೆ ಆಗಮಿಸಿದ್ದರು. ಸಭೆಯಲ್ಲಿ 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಸಭೆ ನಡೆದ ತೇರು ಮೈದಾನ ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಭೆಗೆ ಆಗಮಿಸಿದವರಿಗಾಗಿ ಗೋದಿ ಹುಗ್ಗಿ, ರೊಟ್ಟಿ, ಹಿಟ್ಟಿನ ಪಲ್ಲೆ, ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಡುಗೆ ತಯಾರಿಯಾಗಿತ್ತು. ಮಠಾಧೀಶರ ಜೊತೆ ಸಾರ್ವಜನಿಕರು ಕೂಡಾ ಬಂದ ಹಿನ್ನೆಲೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.