Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ಶೂಟ್ ಮಾಡಿದ ಮನೆಯಲ್ಲಿ ಒಂದಲ್ಲ, ಎರಡಲ್ಲ 17 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ರು’- ಹರ್ಷಿಕಾ ಪೂಣಚ್ಛ

‘ನಾವು ಶೂಟ್ ಮಾಡಿದ ಮನೆಯಲ್ಲಿ ಒಂದಲ್ಲ, ಎರಡಲ್ಲ 17 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ರು’- ಹರ್ಷಿಕಾ ಪೂಣಚ್ಛ

ರಾಜೇಶ್ ದುಗ್ಗುಮನೆ
|

Updated on:Aug 03, 2023 | 1:33 PM

‘ತಾಯ್ತ’ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಛ ನಟಿಸಿದ್ದಾರೆ. ಇದೊಂದು ಹಾರರ್ ಸಿನಿಮಾ. ಈ ಸಿನಿಮಾ ಶೂಟಿಂಗ್ ಅನುಭವಗಳ ಬಗ್ಗೆ ಹರ್ಷಿಕಾ ಮಾತನಾಡಿದ್ದಾರೆ.

‘ತಾಯ್ತ’ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಛ (Harshika Poonacha), ರಿಯಾನ್, ಸಾಧು ಕೋಕಿಲ, ಲಯ ಕೋಕಿಲ, ಶಾಹಿದ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಇದೊಂದು ಹಾರರ್ ಸಿನಿಮಾ. ಈ ಸಿನಿಮಾ ಶೂಟಿಂಗ್ ಅನುಭವಗಳ ಬಗ್ಗೆ ಹರ್ಷಿಕಾ ಮಾತನಾಡಿದ್ದಾರೆ. ‘ನಾವು ಮನೆ ಒಂದರಲ್ಲಿ ಎರಡು ತಿಂಗಳು ಶೂಟ್ ಮಾಡಿದ್ದೆವು. ಅಲ್ಲಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಹರ್ಷಿಕಾ ಮಾಹಿತಿ ನೀಡಿದರು. ಬಳಿಕ ಚಿತ್ರತಂಡದವರು ‘ನಾಲ್ಕಲ್ಲ ಹದಿನೇಳು’ ಎಂದು ಅಸಲಿ ವಿಚಾರ ಹೇಳಿದರು. ಇದನ್ನು ಕೇಳಿ ಹರ್ಷಿಕಾ ಕೊಂಚ ಭಯಗೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Aug 03, 2023 01:20 PM