AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ: ಹಸೆಮಣೆ ಏರಲಿರುವ ಹರ್ಷಿಕಾ-ಭುವನ್ ಪೊನ್ನಣ್ಣ

Harshika-Bhuvan: ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಇದೇ ತಿಂಗಳು ಕೊಡಗಿನಲ್ಲಿ ವಿವಾಹವಾಗಲಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ: ಹಸೆಮಣೆ ಏರಲಿರುವ ಹರ್ಷಿಕಾ-ಭುವನ್ ಪೊನ್ನಣ್ಣ
ಹರ್ಷಿಕಾ-ಭುವನ್
ಮಂಜುನಾಥ ಸಿ.
|

Updated on: Aug 02, 2023 | 8:20 PM

Share

ಕೆಲವು ತಿಂಗಳ ಹಿಂದಷ್ಟೆ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವಿವಾಹವಾಗಿದ್ದರು. ಅದಾದ ಬಳಿಕ ನಟ ಅಭಿಷೇಕ್ ಅಂಬರೀಶ್ ಅದ್ಧೂರಿ ವಿವಾಹ ಸದ್ದಾಯಿತು. ಈಗ ಸ್ಯಾಂಡಲ್​ವುಡ್​ನ ತಾರೆಯರು ತಾರಾ ಜೋಡಿಯಾಗಲು ಸಿದ್ಧರಾಗಿದ್ದಾರೆ. ಬಹು ಕಾಲದ ಗೆಳೆಯರಾದ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಭುವನ್ ಪೊನ್ನಣ್ಣ (Bhuvan Ponnanna) ತಮ್ಮ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ತಯಾರಾಗಿದ್ದಾರೆ. ನಟಿ ಹರ್ಷಿಕಾ ತಮ್ಮ ಹಾಗೂ ಭುವನ್​ರ ಮದುವೆ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.

ತಾಯ್ತ ಸಿನಿಮಾದ ಆಡಿಯೋ ಲಾಂಚ್​ನಲ್ಲಿ ಭಾಗವಹಿಸಿದ್ದ ನಟಿ ಹರ್ಷಿಕಾ ಪೂಣಚ್ಚ ತಾವು ಹಾಗೂ ಭುವನ್ ವಿವಾಹವಾಗಲು ನಿಶ್ಚಯಿಸಿರುವುದಾಗಿ ಹೇಳಿದ್ದಾರೆ. ಆಗಸ್ಟ್ 23 ಹಾಗೂ 24 ಕೊಡಗಿನ ಅಂಬತ್ತಿ ಕೊಡವ ಸಮಾಜದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಕೊಡವ ಸಂಪ್ರದಾಯದಂತೇ ಹರ್ಷಿಕಾ-ಭುವನ್ ವಿವಾಹ ನಡೆಯಲಿದೆ.

ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಕಳೆದ ಆರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟಿದ್ದರು. ಕೋವಿಡ್ ಸಮಯದಲ್ಲಿ ಈ ಇಬ್ಬರೂ ಸೇರಿ ಸಮಾಜ ಮುಖಿ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದರು. ಈಗ ಆರು ವರ್ಷದ ತರುವಾಯ ಪ್ರೀತಿಯನ್ನು ವಿವಾಹಕ್ಕೆ ಬಡ್ತಿ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ವಿವಾಹದ ಕುರಿತು ಈ ಹಿಂದೆಯೇ ಸುದ್ದಿಯಾಗಿತ್ತು, ಆದರೆ ಈಗ ಖಾತ್ರಿಯಾಗಿದೆ.

ಇದನ್ನೂ ಓದಿ:Harshika Poonacha: ನೀಲಿ ಸಮುದ್ರದ ತಟದಲ್ಲಿ ಶ್ವೇತ ಸುಂದರಿ ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಇಬ್ಬರೂ ಕೊಡವರಾಗಿದ್ದಾರೆ. ಹರ್ಷಿಕಾ ಪೂಣಚ್ಚ 2008 ರಲ್ಲಿ ‘ಪಿಯುಸಿ’ ಹೆಸರಿನ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಆ ನಂತರ ಕೆಲವು ಕೊಡವ ಸಿನಿಮಾಗಳು, ಕೆಲವು ಸಿನಿಮಾಗಳಲ್ಲಿ ಪೋಷಕ ನಟಿ, ಮುಖ್ಯ ನಟಿಯಾಗಿಯೂ ನಟಿಸಿದರು. ತೆಲುಗು, ಭೋಜ್​ಪುರಿ ಸಿನಿಮಾಗಳಲ್ಲಿಯೂ ಹರ್ಷಿಕಾ ನಟಿಸಿದ್ದು, ಕೆಲವು ನೆನಪುಳಿಯುವ ಪಾತ್ರಗಳಲ್ಲಿಯೂ ಕಾಣಸಿಕೊಂಡಿದ್ದಾರೆ.

ಇನ್ನು ಭುವನ್ ಪೊನ್ನಣ್ಣ, ಸುದೀಪ್ ನಿರ್ದೇಶನದ ‘ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಆ ಬಳಿಕ ‘ಕೂಲ್’, ‘ಮಂಜುನಾಥ ಬಿಎ, ಎಲ್​ಎಲ್​ಬಿ’, ‘ಕುಚಿಕು-ಕುಚಿಕು’, ‘ರಾಂಧವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ತಮಿಳು ಸಿನಿಮಾ ಹಾಗೂ ಒಂದು ಕನ್ನಡ ಧಾರಾವಾಹಿಯಲ್ಲಿಯೂ ಭುವನ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?