ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ಚಾಟ್​​ ನಿಜಾನಾ ಎಂದು ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ

Edited By:

Updated on: Nov 08, 2026 | 6:42 PM

ಮುಖ್ಯಾಂಶಗಳು

  • ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ
  • ಹೇಳಿಕೆ, ಚಾಟ್ ನಾನು ನೋಡಿದೆ, ಅದೆಲ್ಲವೂ ಸುಳ್ಳು ಆರೋಪ
  • ಆ ಚಾಟ್ ನಿಜಾನಾ ಎಂದು ತಿಳಿದುಕೊಳ್ಳಲು ದೂರು ನೀಡ್ತೇನೆ

ಹೆಚ್​ಡಿ ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಹಾಸನ ಡಿಸಿ ಲತಾಕುಮಾರಿ ತೀವ್ರವಾಗಿ ನಿರಾಕರಿಸಿದ್ದಾರೆ. ವಾಟ್ಸಾಪ್ ಚಾಟ್ ಆಧಾರಿತ ಆರೋಪಗಳ ಬಗ್ಗೆ ತನಿಖೆಗೆ ಎಫ್‌ಐಆರ್ ದಾಖಲಿಸುವುದಾಗಿ ತಿಳಿಸಿರುವ ಅವರು, ಇದು ಸತ್ಯಕ್ಕೆ ದೂರವಾದ ಸುಳ್ಳು ಆರೋಪ ಎಂದು ಹೇಳಿ ನೋವು ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ.

ಹಾಸನ, ನವೆಂಬರ್​​ 08: ಹಾಸನ ಡಿಸಿ ಮತ್ತು ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಜಿಲ್ಲಾಧಿಕಾರಿ ಕೆಎಸ್​ ಲತಾಕುಮಾರಿ ಪ್ರತಿಕ್ರಿಯಿಸಿದ್ದು, ‘ಹೇಳಿಕೆ, ಚಾಟ್ ನಾನು ನೋಡಿದೆ, ಅದೆಲ್ಲವೂ ಸುಳ್ಳು ಆರೋಪ. ಆ ಚಾಟ್ ನಿಜಾನಾ ಎಂದು ತಿಳಿದುಕೊಳ್ಳಲು ದೂರು ನೀಡುತ್ತೇನೆ. ಇದು ತುಂಬಾ ಬೇಜಾರು ಹಾಗೂ ನೋವು ಕೊಡುವ ವಿಚಾರ. ಅವರು ಸುದ್ದಿಗೋಷ್ಠಿ ಮಾಡುವ ಬದಲು ದೂರು ನೀಡಬೇಕಿತ್ತು. ನಾವು ಹಾಸನಾಂಬೆ ಜಾತ್ರೆಯಲ್ಲಿ ಬ್ಯುಸಿ ಇರುವಾಗ ವೈಯಕ್ತಿಕ ಆರೋಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತಾಡ್ತೇನೆ, ಹಾಗಾಗಿ ನಾನು ಧೈರ್ಯವಾಗಿ ಮಾತನಾಡುತ್ತಿದ್ದೇನೆ’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More