ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ: ಆನ್‌ಲೈನ್ ಬುಕ್ಕಿಂಗ್‌ನಿಂದ ಹರಿದುಬಂತು 1 ಕೋಟಿ ರೂ.ಗೂ ಅಧಿಕ ಹಣ

Edited By:

Updated on: Oct 29, 2026 | 12:35 PM

ಹಾಸನದಲ್ಲಿ ಆರಂಭವಾಗಿರುವ ವಿಶ್ವಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ಮೂಲಕ ದೇವಾಲಯದ ಬಾಗಿಲು ತೆರೆಯುವ ಮುನ್ನವೇ 1 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದೆ. 75,000ಕ್ಕೂ ಹೆಚ್ಚು ಭಕ್ತರು ಶೀಘ್ರ ದರ್ಶನ ಟಿಕೆಟ್ ಪಡೆದಿದ್ದಾರೆ. ಮುಜರಾಯಿ ಸಚಿವರು, ದೇಗುಲದ ಮೂಲಸೌಕರ್ಯ ಅಭಿವೃದ್ಧಿಗೆ ಬದ್ಧ ಎಂದಿದ್ದಾರೆ.

ಹಾಸನ, ಅ.29: ಇಂದಿನಿಂದ ಶ್ರದ್ಧಾ ಭಕ್ತಿಗಳಿಂದ ಆರಂಭಗೊಳ್ಳುತ್ತಿರುವ ವಿಶ್ವಪ್ರಸಿದ್ಧ ‘ಹಾಸನಾಂಬೆ ಜಾತ್ರಾ ಮಹೋತ್ಸವ’ ಬಾಗಿಲು ಓಪನ್ ಆಗುವ ಮುನ್ನವೇ ಭಾರಿ ದಾಖಲೆ ಬರೆದಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಿಂದ ದೇವಾಲಯಕ್ಕೆ ಆರಂಭಕ್ಕೂ ಮುನ್ನವೇ ಬರೋಬ್ಬರಿ 1 ಕೋಟಿ ರೂ.ಗೂ ಅಧಿಕ ಆದಾಯ ಹರಿದುಬಂದಿದೆ. ಈ ಕುರಿತು ಮುಜರಾಯಿ ಇಲಾಖೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಸನಾಂಬೆ ದರ್ಶನಕ್ಕಾಗಿ ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಭಕ್ತಾದಿಗಳು ಈಗಾಗಲೇ ಆನ್‌ಲೈನ್ ಪೋರ್ಟಲ್ ಮೂಲಕ ಭಾರಿ ಪ್ರಮಾಣದಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಇಂದಿನವರೆಗೆ ಬರೋಬ್ಬರಿ 75,000ಕ್ಕೂ ಹೆಚ್ಚು ಭಕ್ತರು ಆನ್‌ಲೈನ್ ಮೂಲಕ ಶೀಘ್ರ ದರ್ಶನದ ಟಿಕೆಟ್‌ಗಳನ್ನು ಖರೀದಿಸಿದ್ದು, ಇದರಿಂದ ದೇವಸ್ಥಾನದ ಖಜಾನೆಗೆ 1 ಕೋಟಿ ರೂ.ಗೂ ಅಧಿಕ ಹಣ ಜಮೆಯಾಗಿದೆ. “ಹಾಸನಾಂಬೆ ದರ್ಶನೋತ್ಸವಕ್ಕೆ ಪ್ರಸಕ್ತ ವರ್ಷ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ. ಹಾಸನಾಂಬೆ ದೇಗುಲವು ರಾಜ್ಯದ ಪ್ರಮುಖ ‘ಎ ಗ್ರೇಡ್’ (A-Grade) ದೇವಾಲಯವಾಗಿದ್ದು, ಇಲ್ಲಿಗೆ ಅಗತ್ಯವಿರುವ ಶಾಶ್ವತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ದರ್ಶನೋತ್ಸವ ಯಶಸ್ವಿಯಾಗಿ ಮುಗಿದ ತಕ್ಷಣವೇ ಹಿರಿಯ ಅಧಿಕಾರಿಗಳ ವಿಶೇಷ ಸಭೆ ಕರೆದು, ದೇವಾಲಯದ ಆವರಣದಲ್ಲಿ ಆಗಬೇಕಾದ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More