ಹಾಸನ: ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?

Updated on: Aug 07, 2025 | 10:44 AM

ಹಾಸನದ ಗಾಂಧಿ ಬಜಾರ್‌ನಲ್ಲಿ ಚಿನ್ನಾಭರಣ ಖರೀದಿಗೆ ಬಂದಿದ್ದ ತಾಯಿಯೊಬ್ಬರು ತಮ್ಮ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮರೆತು ಮನೆಗೆ ಹೋದ ಘಟನೆ ನಡೆದಿದೆ. ಮಗು ಕಾಣೆಯಾದ ಬಗ್ಗೆ ಆತಂಕಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದರು. ಆದರೆ, ಮಹಿಳೆಯೊಬ್ಬರು ಮಗುವನ್ನು ಕಂಡು ಅವರನ್ನು ಸಂತೈಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾಸನ, ಆಗಸ್ಟ್​ 07: ಚಿನ್ನಾಭರಣ ಖರೀದಿಗೆ ಬಂದು ತಾಯಿ (mother) ತನ್ನ ಮಗುವನ್ನೇ ಮರೆತ ಘಟನೆ ನಗರದ ಗಾಂಧಿ ಬಜಾರ್‌ನಲ್ಲಿ ನಡೆದಿದೆ. ಹೆಣ್ಣು ಮಗು ಜ್ಯೂವೆಲರಿ ಶಾಪ್‌ನಿಂದ ಹೊರಗೆ ಬಂದು ಅಳುತ್ತ ನಿಂತಿತ್ತು. ಮಗುವಿನ ಪೋಷಕರು ಯಾರೂ ಕಾಣದ ಹಿನ್ನೆಲೆಯಲ್ಲಿ ಮಗುವನ್ನು ಸಂತೈಸಿ ಓರ್ವ ಮಹಿಳೆ ಕರೆದುಕೊಂಡು ಹೋಗಿದ್ದಾರೆ. ಇತ್ತ ತಾಯಿ ಮಗು ಕಾಣೆಯಾದ ಬಗ್ಗೆ ಆತಂಕಗೊಂಡಿದ್ದಾರೆ. ಮಗು ಎಲ್ಲಿಯೂ ಸಿಗದಿದ್ದಾಗ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ತಾಯಿ ಉಷಾ ದೂರು ನೀಡಿದ್ದಾರೆ. ಆದರೆ ಅಷ್ಟರಲ್ಲಿ ಮಗುವನ್ನು ಕರೆದೊಯ್ದು ಊಟ ಮಾಡಿಸಿದ ಮಹಿಳೆ ನಂತರ ಪೊಲೀಸರಿಗೆ ಒಪ್ಪಿಸಲು ಬಂದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಮಗುವನ್ನು ತಾಯಿಗೆ ಹಸ್ತಾಂತರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.