ಸೀಗೆಗುಡ್ಡದಲ್ಲಿ ಜನವೋ ಜನ…ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ ಸಿನಿಮಾ
'ಪ್ರೇಮದ ಊರಲಿ' ಕನ್ನಡ ಚಿತ್ರರಂಗದಲ್ಲಿ ಭಾರೀ ಯಶಸ್ಸು ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಯಶಸ್ಸಿನ ನಂತರ ಚಿತ್ರೀಕರಣಗೊಂಡ ಹಾಸನದ 'ಸೀಗೆಗುಡ್ಡ ಮಳೆ ಮಲ್ಲೇಶ್ವರ' ಕ್ಷೇತ್ರ ಪ್ರವಾಸಿಗರ ಆಕರ್ಷಣೆಯಾಗಿದೆ. ಹಾಸನ ನಗರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ ಈ ಸೀಗೆಗುಡ್ಡ. ಸುತ್ತಲೂ ಹಸಿರಿನ ಕಾನನ, ಎತ್ತರದ ಬೆಟ್ಟಗುಡ್ಡಗಳು ಮತ್ತು ತಂಗಾಳಿಯ ನಡುವೆ ನೆಲೆಸಿರುವ ಈ ಕ್ಷೇತ್ರ ಪ್ರಕೃತಿ ಪ್ರಿಯರ ಪಾಲಿಗೆ ಸ್ವರ್ಗವಾಗಗಿದೆ. ಹೀಗಾಗಿ ಈ ಗುಡ್ಡ ಹಾಗೂ ವಾತಾವರಣವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.
ಹಾಸನ, (ಅಕ್ಟೋಬರ್ 26): ‘ಪ್ರೇಮದ ಊರಲಿ’ ಕನ್ನಡ ಚಿತ್ರರಂಗದಲ್ಲಿ ಭಾರೀ ಯಶಸ್ಸು ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಯಶಸ್ಸಿನ ನಂತರ ಚಿತ್ರೀಕರಣಗೊಂಡ ಹಾಸನದ ‘ಸೀಗೆಗುಡ್ಡ ಮಳೆ ಮಲ್ಲೇಶ್ವರ’ ಕ್ಷೇತ್ರ ಪ್ರವಾಸಿಗರ ಆಕರ್ಷಣೆಯಾಗಿದೆ. ಹಾಸನ ನಗರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ ಈ ಸೀಗೆಗುಡ್ಡ. ಸುತ್ತಲೂ ಹಸಿರಿನ ಕಾನನ, ಎತ್ತರದ ಬೆಟ್ಟಗುಡ್ಡಗಳು ಮತ್ತು ತಂಗಾಳಿಯ ನಡುವೆ ನೆಲೆಸಿರುವ ಈ ಕ್ಷೇತ್ರ ಪ್ರಕೃತಿ ಪ್ರಿಯರ ಪಾಲಿಗೆ ಸ್ವರ್ಗವಾಗಗಿದೆ. ಹೀಗಾಗಿ ಈ ಗುಡ್ಡ ಹಾಗೂ ವಾತಾವರಣವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ವಾರಾಂತ್ಯದಲ್ಲಿ ಇಡೀ ಕುಟುಂಬದೊಂದಿಗೆ ಸೀಗೆಗುಡ್ಡಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಅಲ್ಲದೇ ಕೆಲ ಕಿಡಿಗೇಡಿಗಳು ಮದ್ಯಪಾನ ಮಾಡುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 26, 2026 04:51 PM
Loading...
Unable to load recommendations.
Follow Us
