ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿದ್ದ ಟೋಲ್ ಪ್ಲಾಜಾದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣ
ಕಳೆದ 6 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹೇಳುತ್ತಿದ್ದರೂ ಸ್ಥಳೀಯ ಜನರಿಂದ ಹಣ ಪೀಕುವುದು ಮುಂದುವರಿಸಿದ್ದರಿಂದ ಇಂದು ಸಂಸದರು ಪ್ಲಾಜಾದ ಮ್ಯಾನೇಜರ್ ನನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ.
ಹಾಸನ: ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗುವಾಗ ಈ ಸಂಗತಿ ನಿಮ್ಮ ಗಮನಕ್ಕೂ ಬಂದಿರಬಹುದು. ಅಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ದುರಂಹಕಾರದಿಂದ ವರ್ತಿಸುತ್ತಾರೆ. ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಟೋಲ್ ಪ್ಲಾಜಾದ (toll plaza) ಸಿಬ್ಬಂದಿ ಸುತ್ತಮುತ್ತಲಿನ ಜನ ಹಾಗೂ ರೈತರಿಂದ ಬಲವಂತದಿಂದ ಹಣ ಪೀಕುವುದು, ಹೆದರಿಸುವುದು ಮಾಡುತ್ತಿದ್ದಾರೆ ಅಂತ ಜನ ಪದೇಪದೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಗಮನಕ್ಕೆ ತರಲಾಗಿತ್ತು. ಸಂಸದ ಸಹ ಅನೇಕ ಬಾರಿ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ. ಆದರೆ ನಾಯಿ ಬಾಲ ಡೊಂಕು ಎಂಬಂತೆ ಕಳೆದ 6 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹೇಳುತ್ತಿದ್ದರೂ ಸಿಬ್ಬಂದಿ ಸ್ಥಳೀಯ ಜನರಿಂದ ಹಣ ಪೀಕುವುದು ಮುಂದುವರಿಸಿದ್ದರಿಂದ ಇಂದು ಸಂಸದರು ಪ್ಲಾಜಾದ ಮ್ಯಾನೇಜರ್ನನ್ನು (Manager) ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಟೋಲ್ ಪ್ಲಾಜಾ ಗುತ್ತಿಗೆ ಪಡೆದವರಿಗೆ ಫೋನ್ ಮಾಡಿ ಮ್ಯಾನೇಜರ್ ನನ್ನು ಕೂಡಲೇ ಬದಲಿಸುವಂತೆ ಒತ್ತಡ ಹೇರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ