Video: ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದ ಸಿಎಂ ಸಿದ್ದರಾಮಯ್ಯ

Edited By:

Updated on: Nov 07, 2023 | 7:58 PM

ಕಲರ್​ಫುಲ್​ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್​.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್​.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ. 

ಹಾಸನ, ನವೆಂಬರ್​​​​​ 07: ಹಾಸನಾಂಬೆ ದರ್ಶನ ಬಳಿಕ ಜಿಲ್ಲಾಡಳಿತದಿಂದ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಲಾಗಿದೆ. ಈ ವೇಳೆ ಪೇಟ ಹಾಕಿಸಿಕೊಳ್ಳಲು ಸಿದ್ದರಾಮಯ್ಯ (Siddaramaiah) ನಿರಾಕರಿಸಿದ್ದಾರೆ. ಕಲರ್​ಫುಲ್​ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್​.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್​.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ.  ಬಳಿಕ ಶಾಲು, ಹಾರಹಾಕಿ ಸಿಎಂಗೆ ರಾಜಣ್ಣ ಮತ್ತು ಡಿಸಿ ಸತ್ಯಭಾಮಾ ಸನ್ಮಾನಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More