Loading video

ಹಾಸನ: ಎಷ್ಟೇ ಮನವಿ ಮಾಡಿದರೂ ಕ್ಯಾರೇ ಎನ್ನದ ಅಧಿಕಾರಿಗಳು, ವಿದ್ಯುತ್ ಕಂಬ ನಡುಬಿಟ್ಟು ಮನೆ ನಿರ್ಮಾಣ

| Updated By: ಆಯೇಷಾ ಬಾನು

Updated on: Aug 06, 2023 | 3:14 PM

ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗಣೇಶ್ ಎಂಬ ವ್ಯಕ್ತಿ ವಿದ್ಯುತ್ ಕಂಬದ ಜೊತೆಗೆಯೇ ಮನೆ ನಿರ್ಮಿಸಿದ್ದಾರೆ. ಮೂವತ್ತು ವರ್ಷ ಕಳೆದರೂ ವಿದ್ಯುತ್ ಕಂಬ ತೆರವು ಮಾಡಿಲ್ಲ.

ಹಾಸನ, ಆ.06: ಮನೆ ಕಟ್ಟುವಾಗ ಅಡ್ಡವಾದ ವಿದ್ಯುತ್ ಕಂಬ ತೆರವಿಗೆ ಎಷ್ಟೇ ಮನವಿ ಮಾಡಿದರೂ ಸೆಸ್ಕ್ ಸಿಬ್ಬಂದಿ ಸ್ಪಂದಿಸದ ಕಾರಣ ವ್ಯಕ್ತಿ ಅನಿವಾರ್ಯವಾಗಿ ವಿದ್ಯುತ್ ಕಂಬ ಸೇರಿಸಿ ಮನೆ ನಿರ್ಮಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗಣೇಶ್ ಎಂಬ ವ್ಯಕ್ತಿ ವಿದ್ಯುತ್ ಕಂಬದ ಜೊತೆಗೆಯೇ ಮನೆ ನಿರ್ಮಿಸಿದ್ದಾರೆ. ಮೂವತ್ತು ವರ್ಷ ಕಳೆದರೂ ವಿದ್ಯುತ್ ಕಂಬ ತೆರವು ಮಾಡಿಲ್ಲ.

ಗ್ರಾಮದ ಗಣೇಶ್ ಎಂಬುವವರಿಗೆ ಸರ್ಕಾರದಿಂದ ನಿವೇಶನ ಮಂಜೂರಾಗಿತ್ತು. ಮನೆ ನಿರ್ಮಿಸಬೇಕು ವಿದ್ಯುತ್ ಕಂಬ ತೆರವು ಮಾಡುವಂತೆ ಸೆಸ್ಕ್ ಇಲಾಖೆಗೆ ಮನವಿ ಮಾಡಿದ್ದರು. ಗಣೇಶ್ ಮನವಿಗೆ ಸೆಸ್ಕ್ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬೇರೆ ದಾರಿಯಿಲ್ಲದೇ ವಿದ್ಯುತ್ ಕಂಬ ಸೇರಿಸಿ ಗಣೇಶ್ ಮನೆ ನಿರ್ಮಿಸಿದ್ದಾರೆ. ಕಮಲಮ್ಮ ಎಂಬುವವರಿಗೆ ಮನೆ ಮಾರಾಟ ಮಾಡಿದ್ದಾರೆ. ಕಂಬದ ಮೇಲೆ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದೆ. ಹೀಗಾಗಿ ಮನೆ ನಿವಾಸಿಗಳು ಭಯದಲ್ಲೇ ಬದುಕುತ್ತಿದ್ದಾರೆ. ಮನೆಯ ಅಣತಿ ದೂರದಲ್ಲಿ ಇನ್ನೆರಡು ವಿದ್ಯುತ್ ಕಂಬಗಳಿವೆ. ಕೈಗೆಟುಕುವ ಅಂತರದಲ್ಲಿಯೇ ವಿದ್ಯುತ್ ತಂತಿಗಳು ಹಾದು ಹೋಗಿವೆ. ವಿದ್ಯುತ್ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜನರು ಆಕ್ರೋಶ ಹೊರ ಹಾಕಿದ್ದಾರೆ.