ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಪ್ರವಹಿಸಿದ ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ: ಹಾಸನ ಪೊಲೀಸ್ ವರಿಷ್ಠಾಧಿಕಾರಿ

|

Updated on: Nov 10, 2023 | 5:37 PM

ಘಟನೆಯ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದು ಸಾವಿರಾರು ಭಕ್ತಾದಿಗಳು ಧರ್ಮ ದರ್ಶನಕ್ಕಾಗಿ ಸರತಿ ಸಾಲಲ್ಲಿ ನಿಂತಿದ್ದಾರೆ ಎಂದು ಸುಜೀತಾ ಹೇಳಿದರು. ಹಾಸನದ ವರದಿಗಾರ ಹೇಳುವ ಹಾಗೆ, ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಈ ವರ್ಷ ಹಾಸನಾಂಬೆ ದರ್ಶನಕ್ಕೆ ಆಗಮಿಸುತ್ತಿರುವ ಮಹಿಳೆಯರ ಸಂಖ್ಯೆ ಅಪರಿಮಿತವಾಗಿದೆ.

ಹಾಸನ: ಸಾವಿರಾರು ಜನ ಹಾಸನಾಂಬೆಯ (Hasanambe) ಧರ್ಮದರ್ಶನ ಸಾಲಲ್ಲಿ ನಿಂತಾಗ ಬ್ಯಾರಿಕೇಡ್ ನಲ್ಲಿ ವಿದ್ಯುತ್ ಪ್ರವಹಿಸಿದ ಕಾರಣ ಭಕ್ತರು ಹೆದರಿಕೆ ಮತ್ತು ಆತಂಕದಲ್ಲಿ ಪ್ರಾಣವುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಘಟನೆಯನ್ನು ಈಗಾಗಲೇ ವರದಿ ಮಾಡಿದ್ದೇವೆ. ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Hassan SP) ಮಹಮ್ಮದ್ ಸುಜೀತಾ ಎಮ್ ಎಸ್ (Mohammad Sujeetha MS) ಅವರೊಂದಿಗೆ ಮಾತಾಡಿದ್ದು ಅವರು ಹೇಳುವ ಪ್ರಕಾರ ಪ್ರಾಣಾಪಾಯದಂಥ ಸಂಗತಿಯೇನೂ ನಡೆದಿಲ್ಲ. ಬ್ಯಾರಿಕೇಡ್ ನಲ್ಲಿ ವಿದ್ಯುತ್ ಪ್ರವಹಿಸಿದಕ್ಕೆ ಕಾರಣವನ್ನು ಜೆಸ್ಕಾಂ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ ಎಂದು ಹೇಳಿದರು. ವಿದ್ಯುತ್ ಶಾಕ್ ಅನುಭವಿಸಿದ ಸುಮಾರು 15 ಜನರನ್ನು ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಸ್ ಪಿ ಹೇಳಿದರು. ಘಟನೆಯ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದು ಸಾವಿರಾರು ಭಕ್ತಾದಿಗಳು ಧರ್ಮ ದರ್ಶನಕ್ಕಾಗಿ ಸರತಿ ಸಾಲಲ್ಲಿ ನಿಂತಿದ್ದಾರೆ ಎಂದು ಸುಜೀತಾ ಹೇಳಿದರು. ಹಾಸನದ ವರದಿಗಾರ ಹೇಳುವ ಹಾಗೆ, ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಈ ವರ್ಷ ಹಾಸನಾಂಬೆ ದರ್ಶನಕ್ಕೆ ಆಗಮಿಸುತ್ತಿರುವ ಮಹಿಳೆಯರ ಸಂಖ್ಯೆ ಅಪರಿಮಿತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on