ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ಭಕ್ತರಿಗೆ ವಿದ್ಯುತ್ ಶಾಕ್ , ಆವರಣದಲ್ಲಿ ನೂಕುನುಗ್ಗಲು
Electric Shock In Hasanamba Temple: ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ (Hasanamba Temple) ಭಕ್ತರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ದೇವಸ್ಥಾನದ ಆವರಣದಲ್ಲಿ ನೂಕುನುಗ್ಗಲ್ಲು ಉಂಟಾಗಿದೆ.
ಹಾಸನ, (ನವೆಂಬರ್ 10): ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ (Hasanamba Temple) ಭಕ್ತರಿಗೆ ವಿದ್ಯುತ್ ಶಾಕ್ ಹೊಡೆದಿದೆ. ದೇವಿಯ ದರ್ಶನ ಪಡೆಯಲು ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ವಿದ್ಯುತ್ ಶಾಕ್ ಹೊಡಿದಿದೆ. ಇದರಿಂದ ಭಕ್ತರು ಭಯಗೊಂಡು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೂಕುನುಗ್ಗಲ್ಲು ಉಂಟಾಗಿದೆ. ನೂಕುನುಗ್ಗಲು ವೇಳೆ ಮಹಿಳೆಯರು, ಯುವತಿಯರು ನೆಲಕ್ಕೆ ಬಿದ್ದಿದ್ದು, ಹಲವರಿಗೆ ಗಾಯಗಳಾಗಿವೆ. ಸದ್ಯ ಗಯಾಗೊಂಡ ಭಕ್ತರನ್ನು ಹಾಸನ ಆಸ್ಪತ್ರೆಗೆ ದಾಖಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದರ್ಮ ದರ್ಶನ ಸರತಿ ಸಾಲಿನ ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಮಹಿಳಾ ಭಕ್ತರು ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ್ದಾರೆ. ಇನ್ನು ಕೆಲವರು ಓಡಲು ಆಗದೇ ಕುಸಿದು ಬಿದ್ದಿದ್ದಾರೆ. ಅಂತವರನ್ನು ಸ್ಥಳೀಯರು ಹೊರಗೆಳೆದು ಕರೆತಂದಿದ್ದಾರೆ. ಇನ್ನು ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಕೋಟಿ ಕೋಟಿ ಆದಾಯ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚು ಹಣ ಸಂಗ್ರಹ
ಹಾಸನಾಂಬೆ ದೇಗುಲದಲ್ಲಿ ಟಿವಿ9ಗೆ ಎಸ್ಪಿ ಮೊಹಮ್ಮದ್ ಸುಜಿತಾ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಕರೆಂಟ್ ಹೊಡೆದ ಮಾಹಿತಿ ಇದೆ. ಅಸ್ವಸ್ಥರಿಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಭಕ್ತರ ಅಸಮಾಧಾನ
ಈ ಬಗ್ಗೆ ಭಕ್ತರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸರತಿ ಸಾಲಿನಲ್ಲಿ ನಿಂತ ಕೆಲವರಿಗೆ ವಿದ್ಯುತ್ ತಗುಲಿದೆ. ಇದರಿಂದ ಒಬ್ಬರ ಮೇಲೋಬ್ಬರು ಬಿದ್ದಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಕೇವಲ ರಾಜಕಾರಣಗಳಿಗೆ, ಸಿನಿಮಾದವರಿಗೆ, ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ಮಾತ್ರ ಸಕಲ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜಕನಿಕರು ಅಮ್ಮನ ದರ್ಶನ ಮಾಡುವುದಕ್ಕೆ ಇಕ್ಕಟ್ಟಿನಲ್ಲೇ ಹೋಗಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದೀಗ ಬಂದ ಮಾಹಿತಿ ಪ್ರಕಾರ ದೇವಸ್ಥಾನ ಆಡಳಿತ ಮಂಡಳಿ ಎಲ್ಲವನ್ನು ಕಂಟ್ರೋಲ್ ಮಾಡಿ ಈಗ ಭಕ್ತರಿಗೆ ಮತ್ತೆ ದರ್ಶಕ್ಕೆ ವ್ಯವಸ್ಥೆ ಮಾಡಿ ಕೊಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Fri, 10 November 23