AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಕೋಟಿ ಕೋಟಿ ಆದಾಯ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚು ಹಣ ಸಂಗ್ರಹ

Hasanamba temple Records In Income: ಈ ಬಾರಿ ಹಾಸನದ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಕೇವಲ ಒಂದೇ ವಾರದಲ್ಲಿ ಅಂದರೆ 7 ದಿನಗಳಲ್ಲೇ ಕೋಟಿ ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದು ಹಾಸನಾಂಬೆ ದರ್ಶನೋತ್ಸದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಗಾದ್ರೆ, ಈ ಬಾರಿ ಬಂದ ಆದಾಯ ಎಷ್ಟು? ಯಾವುದರಿಂದ ಎಷ್ಟೆಷ್ಟು ಹಣ ಸಂಗ್ರಹವಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಕೋಟಿ ಕೋಟಿ ಆದಾಯ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚು ಹಣ ಸಂಗ್ರಹ
ಹಾಸನಾಂಬೆ
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ|

Updated on:Nov 10, 2023 | 11:59 AM

Share

ಹಾಸನ, (ನವೆಂಬರ್ 10):  ಹಾಸನದ (Hassan) ಪ್ರಸಿದ್ಧ ಹಾಸನಾಂಬೆ (Hassanamba) ಆಶೀರ್ವಾದಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ನವೆಂಬರ್ 3ರಿಂದಲೇ 12 ದಿನ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನೋತ್ಸವ ಶುರುವಾಗಲಿದ್ದು, ಹಾಸನಾಂಬೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಇನ್ನು ಏಳು ದಿನಗಳ ದರ್ಶನದ ಅಂತ್ಯಕ್ಕೆ ಹಾಸನಾಂಬೆ ದೇಗುಲಕ್ಕೆ ಒಟ್ಟು 3 ಕೋಟಿ 18ಲಕ್ಷದ 30 ಸಾವಿರ ರೂ. ಆದಾಯ ಹರಿದುಬಂದಿದೆ. ಇದು ಕೇವಲ ನವೆಂಬರ್ 3ರಿಂದ ನವೆಂಬರ್ 10ರ ವರೆಗೆ ಅಂದರೆ ಏಳೇ ದಿನಗಳಲ್ಲಿ ಸಂಗ್ರಹವಾದ ಹಣ. ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ರೂ. ಆದಾಯ ಸಂಗ್ರಹವಾಗಿರುವುದು ದಾಖಲೆಯಾಗಿದೆ. ಇನ್ನು ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚಿನ ಆದಾಯ ಸಂಗ್ರಹವಾಗಿದೆ. ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಯಾವುದರಿಂದ ಎಷ್ಟು ಹಣ ಸಂಗ್ರಹ?

ವಿಶೇಷ ದರ್ಶನದ ಪಾಸ್, ಲಡ್ಡು ಮಾರಾಟದಿಂದ ಆದಾಯಲ್ಲಿ ಹೆಚ್ಚಳವಾಗಿದೆ.  1 ಸಾವಿರ ರೂಪಾಯಿ ಮೌಲ್ಯದ ಟಿಕೆಟ್​ ಮಾರಾಟದಿಂದ 1ಕೋಟಿ 35 ಲಕ್ಷದ 81 ಸಾವಿರ ರೂಪಾಯಿ ಜಮೆಯಾಗಿದ್ದರೆ, 300 ರೂ.ಟಿಕೆಟ್ ಮಾರಾಟದಿಂದ 1 ಕೋಟಿ 43ಲಕ್ಷದ 33 ಸಾವಿರ ರೂ. ಸಂಗ್ರಹವಾಗಿದೆ. ಇನ್ನು ಲಡ್ಡು ಪ್ರಸಾದ ಮಾರಾಟದಿಂದ 39 ಲಕ್ಷದ 16 ಸಾವಿರ ರೂ. ಹಣ ಸಂಗ್ರಹವಾಗಿದೆ. ಇದರೊಂದಿಗೆ ನವೆಂಬರ್ 3ರಿಂದ ನವೆಂಬರ್ 10ರ ವರೆಗೆ 3,18,30,320 ರೂ.(3 ಕೋಟಿ 18 ಲಕ್ಷದ 30 ಸಾವಿರ ರೂ.) ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಆದಾಯ ಹರಿಬಂದಿದೆ.

ಇದನ್ನೂ ಓದಿ: 12 ದಿನ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನೋತ್ಸವ

ಈಗಾಗಲೇ ಹಾಲಿ ಮುಖ್ಯಂಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಸೇರಿದಂತೆ ಹಲವು ರಾಜಕೀಯ ಮುಖಂಡರು, ಗಣ್ಯರು ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದಾರೆ.

ಇನ್ನೂ ನಾಲ್ಕು ದಿನ ಸಾರ್ವಜನಿಕರ ದರ್ಶನಕ್ಕೆ ಅವಾಶಕ ಇದ್ದು, ಇನ್ನಷ್ಟು ಭಕ್ತು ಅಮ್ಮನ ದರ್ಶನಕ್ಕೆ ಬರಲಿದ್ದಾರೆ. ಹೀಗಾಗಿ ಆದಾಯದಲ್ಲೂ ಸಹ ಇನ್ನಷ್ಟು ಹೆಚ್ಚಳವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Fri, 10 November 23

ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್